ಚಿಕ್ಕಮಗಳೂರು : ಎಪಿಎಂಸಿಯಲ್ಲಿ ಇದ್ದ ಜನರನ್ನ ಕಂಡು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಜನರಲ್ಲಿ ಸಾಮಾಜಿಕ ಅಂತರ ಕಾಪಾಡಿ, ಮುಖಕ್ಕೆ ಮಾಸ್ಕ್ ಧರಿಸುವಂತೆ ಕೈಮುಗಿದು ಪ್ರಾರ್ಥಿಸಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.
ತರೀಕೆರೆ ಪಟ್ಟಣದ ಎಪಿಎಂಸಿಯಲ್ಲಿ ಬೆಳ್ಳಂಬೆಳಗ್ಗೆಯೇ ನೂರಾರು ಜನ ವ್ಯಾಪಾರ-ವಹಿವಾಟಿನಲ್ಲಿ ತೊಡಗಿದ್ದರು. ಅವರಲ್ಲಿ ಬಹುತೇಕರು ಮುಖಕ್ಕೆ ಮಾಸ್ಕ್ ಹಾಕಿರಲಿಲ್ಲ. ಸಾಮಾಜಿಕ ಅಂತರದ ನಿಯಮವನ್ನೂ ಸಂಪೂರ್ಣ ಗಾಳಿಗೆ ತೂರಿದ್ದರು. ಇದನ್ನ ಕಂಡ ಪಟ್ಟಣ ಪಂಚಾಯಿತಿಯ 20ಕ್ಕೂ ಹೆಚ್ಚು ನೌಕರರು ಮೈಮುಗಿದು ಸಾಲಾಗಿ ಇಡೀ ಎ.ಪಿ.ಎಂ.ಸಿ ಮಾರ್ಕೇಟ್‍ನಲ್ಲಿ ಒಂದು ಸುತ್ತು ಹಾಕಿ ಪ್ರಾರ್ಥಿಸಿಕೊಂಡಿದ್ದಾರೆ.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೂಡ ಜೀಪಿನಲ್ಲಿ ಅನೌನ್ಸ್ ಮಾಡುತ್ತಾ ರೈತರು, ವ್ಯಾಪಾರಿಗಳು, ವರ್ತಕರಲ್ಲಿ ಕೈಮುಗಿದು ಮಾಸ್ಕ್ ಧರಿಸಿ ಅಂತರ ಕಾಪಾಡುವಂತೆ ಪ್ರಾರ್ಥಿಸಿಕೊಂಡಿದ್ದಾರೆ