ಮಾರಾಟಕ್ಕಿದೆ 45 ವರ್ಷಗಳ ಹಳೆಯ ಕಂಪ್ಯೂಟರ್: ಬೆಲೆ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ

ವಾಷಿಂಗ್ಟನ್: 45 ವರ್ಷಗಳ ಹಳೆಯ ಕಂಪ್ಯೂಟರ್ ಒಂದು ಮಾರಾಟಕ್ಕಿದೆ. ಆದರೆ ಈ ಕಂಪ್ಯೂಟರ್ ನ ಬೆಲೆ ಕೇಲಿದ್ರೆ ನೀವೆಲ್ಲ ದಂಗಾಗೋದು ಗ್ಯಾರಂಟಿ. ಆ್ಯಪಲ್ ಕಂಪನಿಯ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಮತ್ತೋರ್ವ ಸಂಸ್ಥಾಪಕ ಸ್ಟೀವ್ ವಾಸ್ನಿಯಾಕ್ ಜೊತೆಗೂಡಿ 45 ವರ್ಷಗಳ ಹಿಂದೆ ಆ್ಯಪಲ್-1 ಕಂಪ್ಯೂಟರ್ ನ್ನು ಸಿದ್ಧಪಡಿಸಿದ್ದರು. ಇನ್ನೂ ಉತ್ತಮ ಕಂಡೀಷನ್ ನಲ್ಲಿರುವ ಈ ಕಂಪ್ಯೂಟರ್ ಇದೀಗ ಮಾರಾಟಕ್ಕಿದೆ.
ಇ-ಬೇ ನಲ್ಲಿ ಈ ಕಂಪ್ಯೂಟರ್ ಲಭ್ಯವಿದ್ದು, ಇದರ ಬೆಲೆ ಬರೋಬ್ಬರಿ 10 ಕೋಟಿ 90 ಲಕ್ಷ ರೂ. ಸ್ಟೀವ್ ಜಾಬ್ಸ್ ಅವರಿಗೆ ಸೇರಿದ ವಸ್ತುಗಳು ಹೀಗೆ ಆಗಿಂದಾಗ್ಗೆ ಬಿಕರಿಯಾಗುತ್ತಿರುತ್ತವೆ. ಇವರಿಗೆ ಸಂಬಂಧಿಸಿದ ವಸ್ತುಗಳನ್ನು ಕೊಂಡುಕೊಳ್ಳುವುದು ಕೆಲವರ ಖಯಾಲಿ ಕೂಡ. ಕಂಪ್ಯೂಟರ್ ಕೊಂಡವರಿಗೆ ಒರಿಜಿನಲ್ ವುಡ್ ಕೇಸ್ ಸಹ ಸಿಗಲಿದೆ. ಈ ಕಂಪ್ಯೂಟರ್ ಆ್ಯಪಲ್ ಕಂಪನಿಯಿಂದ ಮಾರಾಟವಾದ ಮೊದಲ ಕಂಪ್ಯೂಟರ್ ಶ್ರೇಣಿಗಳದ್ದು.