ಒಂದೇ ದೇಶ, ಒಂದೇ ಪಡಿತರ ವ್ಯವಸ್ಥೆ ಜಾರಿ :

ಬೆಂಗಳೂರು : ಆರ್ಥಿಕ ಪ್ರಗತಿ ಜೊತೆಗೆ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಕೇಂದ್ರ ಅಸ್ತು ನೀಡಿದ್ದು, ಈ ವರ್ಷ ಮಂಡಿಸಿರುವ ಬಜೆಟ್ ನಲ್ಲಿ ಹಲವು ಯೋಜನೆಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
ಲೋಕಸಭೆ ಬಜೆಟ್ ಮಂಡಿಸುವ ವೇಳೆ ಹಲವು ಮಹತ್ವದ ಯೋಜನೆ ಘೋಷಣೆ ಮಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ದೇಶಾದ್ಯಂತ ಒಂದೇ ಪಡಿತರ ಕಾರ್ಡ್ ಯೋಜನೆ ಜಾರಿಗೆ ಬರಲಿದೆ. ಈ ಯೋಜನೆಯು ಶೀರ್ಘದಲ್ಲೇ 32 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನೂತನ ವ್ಯವಸ್ಥೆ ಜಾರಿಗೆ ಬರಲಿದೆ.
ಈ ಯೋಜನೆ ಜಾರಿಯಿಂದ ಅಸಂಘಟಿತ ವಲಯದ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರು ಸಹಿತ ವಿವಿಧ ವಲಯದ ಜನರಿಗೆ ಇದರಿಂದ ಅನುಕೂಲವಾಗಲಿದೆ. ಈ ಯೋಜನೆಯಿಂದ ಒಬ್ಬ ವ್ಯಕ್ತಿ ದೇಶದ ಯಾವುದೇ ರಾಜ್ಯದಲ್ಲಾದರೂ ಪಡಿತರ ಪಡೆಯಬಹುದಾಗಿದೆ. ಈ ವ್ಯವಸ್ಥೆಯಿಂದ ದೇಶದ ಪ್ರತಿಯೋಬ್ಬ ನಾಗರಿಕನೂ ಯಾವುದೇ ಸಮಸ್ಯೆಯಿಲ್ಲದೆ ಪಡಿತರ ಪಡೆದುಕೊಳ್ಳುವ ವ್ಯವಸ್ಥೆ ಬರಲಿದೆ. ಒಂದು ಪಡಿತರ ಚೀಟಿ ಹೊಂದಿರುವ ವ್ಯಕ್ತಿ ಮನೆ ಬದಲಾಯಿಸಿ, ಬೇರೆ ಮನೆಗೆ ತೆರಳಿ ವಾಸವಾದರೆ ಆ ಮನೆಯ ಸಮೀಪದ ಪಡಿತರ ಕೇಂದ್ರದಲ್ಲಿ ಪಡಿತರ ಪಡೆದುಕೊಳ್ಳಲು ಸಹಕಾರಿಯಾಗಲಿದೆ.