ಒಂದು ಡೆಲ್ಟಾ ಪ್ಲಸ್ ವೈರಸ್ ಬೆಂಗಳೂರು ನಗರದಲ್ಲಿ ಪತ್ತೆಯಾಗಿದ್ದು, ರೋಗಿ ಸಂಪೂರ್ಣವಾಗಿ ಗುಣಮುಖರಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಡೆಲ್ಟಾ ಪ್ಲಸ್ ವೈರಸ್ ಸೋಂಕು ಪತ್ತೆಯಾಗಿತ್ತು. ಅವರು ಗುಣಮುಖಿತರಾಗಿದ್ದರೆ, ಅವರ ಸಂಪರ್ಕದಲ್ಲಿ ಇದ್ದವರು ಕೂಡ ಆರೋಗ್ಯವಾಗಿದ್ದಾರೆ ಎಂದರು.
ಡೆಲ್ಟಾ ಪ್ಲಸ್ ವೈರಸ್ ಬಗ್ಗೆ ತಜ್ಞರು ನೀಡುವ ವರದಿಯನ್ನು ಆಧರಿಸಿ ಬಿಬಿಎಂಪಿ ಮುಂದಿನ ಸಿದ್ದತೆ ಮಾಡಿಕೊಳ್ಳುತ್ತದೆ. ಕೊರೊನಾ ಮೊದಲನೇ ಹಾಗೂಎರಡನೇ ಅಲೆಯಲ್ಲಿ ಸುಮಾರು 12 ಲಕ್ಷ ಜನ ಹೋಂ ಐಸೋಲೇಷನ್ ಗೆ ಒಳಗಾಗಿದ್ದರು. ಶೇ.90ರಷ್ಟು ಜನ ಗುಣಮುಖರಾಗಿದ್ದರು ಎಂದು ಅವರು ಸ್ಪಷ್ಟಪಡಿಸಿರು.