ನಮ್ಮಲ್ಲಿ 3 ಲಕ್ಷ ಡೋಸ್ ಮಾತ್ರ ಇದೆ, ಲಸಿಕೆ ಬರುವವರೆಗೆ ಕಾಯಬೇಕು: ಸಚಿವ ಸುಧಾಕರ್​

ಕಲಬುರ್ಗಿ: ಎರಡು ಕೋಟಿ ಲಸಿಕೆಗಾಗಿ ಆರ್ಡರ್ ಮಾಡಿದ್ದೇವೆ. ಕಂಪನಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಸದ್ಯ ನಮ್ಮಲ್ಲಿ 3 ಲಕ್ಷ ಡೋಸ್ ಮಾತ್ರ ಇದೆ. ಇದರಿಂದ ದೊಡ್ಡ ಮಟ್ಟದಲ್ಲಿ ವಿತರಣೆ ಸಾಧ್ಯವಿಲ್ಲ. ಹಾಗಾಗಿ ಲಸಿಕೆ ಬರುವವರೆಗೆ ಕಾಯಬೇಕು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡುವ ಅಭಿಯಾನ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಮಾತ್ರ ಚಾಲನೆ ನೀಡಲಾಗಿದೆ. ಲಸಿಕೆ ಪೂರೈಕೆಯಾದ ಬಳಿಕ ದೊಡ್ಡ ಪ್ರಮಾಣದಲ್ಲಿ ವ್ಯಾಕ್ಸಿನ್ ನೀಡಲಾಗುವುದು

ಸಂಪೂರ್ಣ ಲಾಕ್ ಡೌನ್ ಮಾಡುವ ಚಿಂತನೆ ನಮ್ಮ ಮುಂದಿಲ್ಲ. ಮಹಾರಾಷ್ಟ್ರದಲ್ಲಿ ನಾಲ್ಕು ವಾರದಿಂದ ಲಾಕ್ ಡೌನ್ ಜಾರಿಯಲ್ಲಿದೆ. ಮೂರು ವಾರದ ಬಳಿಕ ಈಗ ನೆಗೆಟಿವ್ ಸಂಖ್ಯೆ ಕಂಡುಬರುತ್ತಿವೆ. ಹಾಗಾಗಿ ನಮ್ಮ ರಾಜ್ಯದಲ್ಲಿ 14 ದಿನಗಳ ಕರ್ಫ್ಯೂ ಮುಗಿದ ಬಳಿಕ ಪರಿಸ್ಥಿತಿ ಅವಲೋಕಿಸಿ ಕರ್ಫ್ಯೂ ಮುಂದುವರಿಸುವ ಬಗ್ಗೆ ತೀರ್ಮಾನಿಸುವುದಾಗಿ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!