ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಹೆಸರಿನಲ್ಲಿ ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿರುವ ರಾಜು ನನ್ನ ಪರಿಚಯಿಸ್ಥ ಹುಡುಗ. ಆದರೆ ನನ್ನ ಪಿಎ ಅಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ತನಿಖೆ ಹಂತದಲ್ಲಿರುವಾಗ ಏನೂ ಮಾತನಾಡಿದರೂ ತಪ್ಪಾಗುತ್ತದೆ. ಆದರೆ ಪ್ರಕರಣ ದಾಖಲಿಸುವ ಮುನ್ನ ನನ್ನ ಬಳಿ ಒಂದು ಮಾತು ಹೇಳಬಹುದಿತ್ತು. ಮಾತನಾಡಿ ಸಮಸ್ಯೆ ಬಗೆಹರಿಸಬಹುದಿತ್ತು ಎಂದರು.
ರಾಜು ನನಗೆ ಪರಿಚಯದ ಹುಡಗ ಆಗಿದ್ದರೂ ನಿರ್ದಿಷ್ಟವಾಗಿ ನನ್ನ ಬಳಿ ಕೆಲಸ ಏನು ಮಾಡುತ್ತಿರಲಿಲ್ಲ. ನನ್ನ ಪರಿಚಯಸ್ಥ ಎಂಬ ಕಾರಣಕ್ಕೆ ತಪ್ಪಿತಸ್ಥರನ್ನ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಮೊದಲು ನನ್ನ ಗಮನಕ್ಕೆ ಬಂದಿರಲಿಲ್ಲ. ವಿಜೇಂದ್ರ ನನ್ನ ಗಮನಕ್ಕೆ ತಂದಿರಲಿಲ್ಲ. ಮಾಧ್ಯಮಗಳ ಮೂಲಕ ಗಮನಿಸಿದೆ ಎಂದು ಅವರು ಹೇಳಿದರು.
ಯಾರೂ ಯಾರ ಹೆಸರನ್ನೂ ದುರ್ಬಳಕೆ ಮಾಡಿಕೊಳ್ಳಬಾರದು. ತನಿಖೆ ನಡೆಯುತ್ತಿರುವ ಸಮಯಲ್ಲಿ ನಾನು ಮಾತನಾಡೋದು ಸರಿಯಲ್ಲ. ಆವರ ಮೇಲೆ ಎಫ್ ಐಆರ್ ಕೂಡ ದಾಖಲಾಗಿದೆ. ವಿಜಯೇಂದ್ರ ಮತ್ತು ಸಿಎಂ ಜೊತೆಯೂ ಮಾತನಾಡುತ್ತೇನೆ. ಮೊದಲೇ ನನ್ನ ಗಮನಕ್ಕೆ ತಂದಿದ್ದರೆ ಕುರಿಸಿ ಮಾತನಾಡುತ್ತಿದ್ದೆ ಎಂದು ಅವರು ಅಭಿಪ್ರಾಯಪಟ್ಟರು.