ಪಾವಗಡ ಬಸ್ ದುರಂತ ಪ್ರಕರಣ – ಚಾಲಕನಿಗೆ ಜಾಮೀನು ಮಂಜೂರು

ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆಯ ಬಳಿ ನಡೆದ ಭೀಕರ ಬಸ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕನಿಗೆ ಜಾಮೀನು ಮಂಜೂರು ಮಾಡಲಾಗಿದೆ. ಪಾವಗಡ ಕೋರ್ಟ್ ನಿಂದ ಜಾಮೀನು ಲಭಿಸಿದೆ. ವಿಚಾರಣೆ ಬಳಿಕ ಪಾವಗಡ ಪೊಲೀಸರು ಚಾಲಕನನ್ನು ಕೋರ್ಟ್ಗೆ ಹಾಜರುಪಡಿಸಿದ್ದರು. ಇದೀಗ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 130 ಕ್ಕೂ ಹೆಚ್ಚು ಜನರನ್ನ ತುಂಬಿಕೊಂಡು ಬಂದು ಆರು ಜನರ ಸಾವಿಗೆ ಕಾರಣವಾಗಿದ್ದ ಬಸ್ ಚಾಲಕ ರಘುಗೆ ಜಾಮೀನು ಸಿಕ್ಕಿದೆ. ಘಟನೆಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ, 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಜಿಲ್ಲೆಯ ಪಾವಗಡದ ಪಳವಳ್ಳಿ ಬಳಿ ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿ ಖಾಸಗಿ ಬಸ್ ಚಾಲಕ ರಘು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಚಾಲಕನ ಹೆಸರು ಬಳಸದೆ ಬಸ್ ನಂಬರ್ ಉಲ್ಲೇಖಿಸಿ FIR ದಾಖಲು ಮಾಡಲಾಗಿತ್ತು. KA06 C8933 SVT ಬಸ್ ಚಾಲಕ A1 ಎಂದು ಉಲ್ಲೇಖ ಮಾಡಿ ಪ್ರಕರಣ ದಾಖಲು ಮಾಡಲಾಗಿತ್ತು. ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!