ಲಾಹೋರ್ ನ ಐತಿಹಾಸಿಕ ಮಸೀದಿಯೊಳಗೆ ಡ್ಯಾನ್ಸ್ ವೀಡಿಯೋ ಶೂಟಿಂಗ್ ಮಾಡಿದ್ದಕ್ಕಾಗಿ ನಟಿ ಸಅಬಾ ಕಮರ್ ಮತ್ತಿತರರನ್ನು ಬಂಧಿಸುವಂತೆ ಪಾಕಿಸ್ತಾನದ ಸ್ಥಳೀಯ ನ್ಯಾಯಾಲಯ ಆದೇಶಿಸಿದೆ.
ಲಾಹೋರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಟಿ ಕಮರ್ ಮತ್ತು ಗಾಯಕಿ ಬಿಲಾಲ್ ಸಯೀದ್ ಅವರಿಗೆ ಜಾಮೀನು ಸಹಿತ ಬಂಧನ ವಾರೆಂಟ್ ಜಾರಿಗೊಳಿಸಿದೆ. ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಿ ಅಕ್ಟೋಬರ್ 6ಕ್ಕೆ ವಿಚಾರಣೆ ಮುಂದೂಡಿದೆ.
ಲಾಹೋರ್ ಪೊಲೀಸ್ ಕಳೆದ ವರ್ಷ ಮಸೀದಿಯೊಳಗೆ ಹಾಡಿನ ದೃಶ್ಯ ಚಿತ್ರೀಕರಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಚಿತ್ರೀಕರಣಕ್ಕೆ ಅವಕಾಶ ನೀಡಿದ್ದರ ಹಿಂದೆ ಹಿರಿಯ ಅಧಿಕಾರಿಗಳು ಇದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.