ಭಾರತ ನಡೆಸುತ್ತಿರುವ ಕೊರೋನಾ ಲಸಿಕಾ ಕಾರ್ಯಕ್ರಮ ಶ್ಲಾಘನೀಯ: ರಾಷ್ಟ್ರಪತಿ ರಾಮನಾಥ್ ಕೋವಿಂದ್

ನವದೆಹಲಿ: ಭಾರತ ನಡೆಸುತ್ತಿರುವ ಬೃಹತ್ ಕೊರೋನಾ ಲಸಿಕಾ ಕಾರ್ಯಕ್ರಮ ಶ್ಲಾಘನೀಯ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಸತ್ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಜಗತ್ತಿನ ಅತಿ ದೊಡ್ಡ ಕೊರೋನಾ ಲಸಿಕಾ ಕಾರ್ಯಕ್ರಮ ನಡೆಯುತ್ತಿದೆ. ಅಲ್ಲದೇ ಬೇರೆ ಬೇರೆ ದೇಶಗಳಿಗೂ ಸಹ ನಾವು ಲಸಿಕೆಗಳನ್ನು ರವಾನಿಸಿದ್ದೇವೆ. ಇದು ನಿಜಕ್ಕೂ ಸಂತಸದ ವಿಚಾರ. ಇಂಥ ಬಿಕ್ಕಟ್ಟಿನ ಸಮಯದಲ್ಲಿಯೂ ವಿದೇಶಗಳಿಗೆ ಸೇವೆ ಸಹಾಯಹಸ್ತ ಚಾಚಿರುವುದು ನಮ್ಮ ಹೆಮ್ಮೆ ಎಂದಿದ್ದಾರೆ.
ಇನ್ನು ಇದೇ ವೇಳೆ ಗಣರಾಜ್ಯೋತ್ಸವದಂದು ನವದೆಹಲಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ರಾಷ್ಟ್ರಪತಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಗಣರಾಜ್ಯೋತ್ಸವದಂದೇ ನಮ್ಮ ಧ್ವಜಕ್ಕೆ ಅವಮಾನಿಸಿರುವುದು ಖಂಡನೀಯ. ರೈತರ ಟ್ರ್ಯಾಕ್ಟರ್ ಪರೇಡ್ ನಲ್ಲಿ ನಡೆದ ಹಿಂಸಾಚಾರ ಅಸಮಾಧಾನವನ್ನುಂಟುಮಾಡಿದೆ. ಗಣರಾಜ್ಯೋತ್ಸವದಂದು ರಾಷ್ಟ್ರರಾಜಧಾನಿಯಲ್ಲಿ ನಡೆದ ಎಲ್ಲ ಘಟನೆಗಳೂ ದುರದೃಷ್ಟಕರ. ನೂತನ ಕೃಷಿ ಕಾಯ್ದೆಗಳು ರೈತರ ಮೂಲಭೂತ ಹಕ್ಕುಗಳಿಗೆ ಗೌರವ ನೀಡುತ್ತವೆ. ಅಲ್ಲದೇ ಈ ಕಾಯ್ದೆಗಳಿಂದ ಲಕ್ಷಾಂತರ ರೈತರಿಗೆ ನಾನಾ ಬಗೆಯ ಸೌಲಭ್ಯಗಳು ಸಿಗಲಿವೆ ಎಂದಿದ್ದಾರೆ.