ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತವಾಗಿ ಏರಿಕೆಯಾಗುತ್ತಲೇ ಇದ್ದು, ಮಂಗಳವಾರವೂ ಅಲ್ಪ ಪ್ರಮಾಣದಲ್ಲಿ ಇಂಧನ ದರ ಏರಿಕೆಯಾಗಿದೆ.
ಮಂಗಳವಾರ ಪೆಟ್ರೋಲ್ ದರವನ್ನು ಲೀಟರ್ ಗೆ 28 ಪೈಸೆ ಹಾಗೂ ಡೀಸೆಲ್ ದರವನ್ನು ಲೀಟರ್ ಗೆ 26 ಪೈಸೆ ಏರಿಕೆ ಮಾಡಲಾಗಿದೆ. ಇದರಿಂದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 97.50 ರೂ. ಹಾಗೂ ಡೀಸೆಲ್ ದರ ಲೀಟರ್ ಗೆ 88.23 ರೂ.ಗೆ ಏರಿಕೆಯಾಗಿದೆ.
ವಾಣಿಜ್ಯ ನಗರಿ ಮುಂಬೈ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಪೆಟ್ರೋಲ್ ದರ ಶತಕ ದಾಟಿದ್ದರೂ ಮತ್ತೆ ಏರಿಕೆಯಾಗುತ್ತಲೇ ಇದ್ದು, ಮುಂಬೈನಲ್ಲಿ ಮಂಗಳವಾರ ಪೆಟ್ರೋಲ್ ದರ 103.63 ರೂ. ಹಾಗೂ ಡೀಸೆಲ್ ದರ 95.72 ರೂ.ಗೆ ಏರಿಕೆಯಾಗಿದೆ.
ಚೆನ್ನೈನಲ್ಲಿ ಪೆಟ್ರೋಲ್ 98.65 ರೂ. ಡೀಸೆಲ್ 92.83 ರೂ. ಹಾಗೂ ಕೋಲ್ಕತಾದಲ್ಲಿ ಪೆಟ್ರೋಲ್ ದರ 97.38 ರೂ. ಹಾಗೂ ಡೀಸೆಲ್ ದರ ಲೀಟರ್ ಗೆ 91.08 ರೂ.ಗೆ ಏರಿಕೆಯಾಗಿದೆ.