ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗುರುವಾರವೂ ಏರಿಕೆಯಾಗಿದ್ದು, ದೇಶದ 15 ನಗರಗಳಲ್ಲಿ ಪೆಟ್ರೋಲ್ ದರ ಶತಕ ದಾಟಿತು.
ತೈಲ ಕಂಪನಿಗಳು ಒಂದು ದಿನದ ಬಿಡುವಿನ ನಂತರ ಮತ್ತೆ ದರ ಏರಿಕೆ ಮಾಡಿವೆ. ಪೆಟ್ರೋಲ್ ಬೆಲೆಯಲ್ಲಿ ಲೀಟರ್ ಗೆ 26 ಪೈಸೆ ಹಾಗೂ ಡೀಸೆಲ್ ಬೆಲೆಯನ್ನು ಕೇವಲ 7 ಪೈಸೆ ಏರಿಕೆ ಮಾಡಲಾಗಿದೆ.
ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 98 ರೂ.ಗೆ ಏರಿಕೆಯಾದರೆ, ಡೀಸೆಲ್ ದರ 88.30 ರೂ.ಗೆ ಜಿಗಿತ ಕಂಡಿದೆ. ಈಗಾಗಲೇ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಏರಿಕೆಯಾಗಿರುವ ಪೆಟ್ರೋಲ್ ದರ ವಾಣಿಜ್ಯ ನಗರಿ ಮುಂಬೈನಲ್ಲಿ 103.89ರೂ.ಗೆ ತಲುಪಿದರೆ, ಡೀಸೆಲ್ ದರ ಲೀಟರ್ ಗೆ 95.79 ರೂ. ಆಗಿದೆ.
ರಾಜಸ್ಥಾನ್ ನ ಗಂಗಾನಗರದಲ್ಲಿ ದೇಶದಲ್ಲಿ ಅತೀ ಹೆಚ್ಚು 108.67ರೂ. ಆಗಿದೆ. ಇಲ್ಲಿ ಡೀಸೆಲ್ ಬೆಲೆ ಕೂಡ 100 ರೂ. ದಾಟಿದೆ. ಮೇ ನಲ್ಲಿ ನಡೆದ ಪಂಚರಾಜ್ಯ ಚುನಾವಣೆ ನಂತರ ಸತತ 30ನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿವೆ.