ಪೆಟ್ರೋಲ್ ಮತ್ತು ಡೀಸೆಲ್ ದರ ಬುಧವಾರ ಮತ್ತೆ ಏರಿಕೆಯಾಗಿದ್ದು, ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ದರ 103 ರೂ. ದಾಟಿದೆ.
ಮಂಗಳವಾರ ಬಿಡುವಿನ ನಂತರ ತೈಲ ಕಂಪನಿಗಳು ಪಟ್ರೋಲ್ ಮೇಲೆ ಲೀಟರ್ ಗೆ 24 ಪೈಸೆ ಹಾಗೂ ಡೀಸೆಲ್ ಮೇಲೆ ಲೀಟರ್ ಗೆ 13 ಪೈಸೆ ಏರಿಕೆ ಮಾಡಿವೆ. ಇದರಿಂದ ರಾಜಧಾನಿ ದೆಹಲಿಯಲ್ಲಿ ಕೂಡ ಪೆಟ್ರೋಲ್ ಬೆಲೆ 96.41ರೂ. ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 87.28 ರೂ.ಗೆ ಏರಿಕೆಯಾಗಿವೆ.
ಮುಂಬೈನಲ್ಲಿ ಪೆಟ್ರೋಲ್ ಬೆಲೆ 102.82 ರೂ.ಆಗಿದ್ದರೆ, ಲೀಟರ್ ದರ ಲೀಟರ್ ಗೆ 94.84 ರೂ.ಗೆ ಏರಿಕೆಯಾಗಿದೆ. ಮಧ್ಯಪ್ರದೇಶದ ರಾವಾದಲ್ಲಿ ದೇಶದಲ್ಲೇ ಅತ್ಯಧಿಕ ಪೆಟ್ರೋಲ್ 107 ರೂ. ಹಾಗೂ ಡೀಸೆಲ್ ಬೆಲೆ 100 ರೂ.ಗೆ ಏರಿಕೆಯಾಗಿದೆ.
ಜಾಗತಿಕ ಮಟ್ಟದಲ್ಲಿ ರೂಪಾಯಿ ಮೌಲ್ಯ ವ್ಯತ್ಯಯದ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿವೆ.