ಕೇಂದ್ರ ಸರಕಾರದಿಂದ ದೇಶದ ಎಲ್ಲಾ ಜನರಿಗೆ ಉಚಿತ ಲಸಿಕೆ ಹಾಗೂ ದೀಪಾವಳಿವರೆಗೂ ಉಚಿತವಾಗಿ ಪಡಿತರ ನೀಡಲಾಗುವುದು ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಸೋಮವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಅನ್ನ ಯೋಜನೆ ಮೂಲಕ ದೇಶದ 80 ಕೋಟಿ ಜನರಿಗೆ ಉಚಿತವಾಗಿ ಪಡಿತರ ಪೂರೈಸಲಾಗುವುದು ಎಂದರು. ಕಳೆದ ವರ್ಷ ಕೂಡ ಕೊರೊನಾ ಅಬ್ಬರ ಹಾಗೂ ಲಾಕ್ ಡೌನ್ ಹಿನ್ನೆಲೆಯಲ್ಲಿ ದೀಪಾವಳಿವರೆಗೂ ಉಚಿತವಾಗಿ ರೇಷನ್ ಪೂರೈಸಲಾಗಿತ್ತು. ಬಡವರು ಯಾರೂ ಹಸಿವಿನಿಂದ ಮಲಗಬಾರದು ಎಂಬ ಕಾರಣಕ್ಕೆ ಈ ವರ್ಷವೂ ಉಚಿತವಾಗಿ ರೇಷನ್ ಪೂರೈಸಲಾಗುವುದು ಎಂದರು.
ಜೂನ್ 21ರಿಂದ ದೇಶದ ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುವುದು. ರಾಜ್ಯಗಳಿಗೆ ಕೇಂದ್ರದಿಂದಲೇ ಉಚಿತ ಲಸಿಕೆ ಪೂರೈಸಲಾಗುವುದು ಎಂದು ಹೇಳಿದರು.
ಕೇಂದ್ರವೇ ಲಸಿಕೆ ಖರೀದಿಸಿ ರಾಜ್ಯಗಳಿಗೆ ಉಚಿತವಾಗಿ ಪೂರೈಸಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಸಿಕೆಗೆ 150 ರೂ. ಶುಲ್ಕ ವಿಧಿಸಲಾಗುವುದು. ಇದರಿಂದ ರಾಜ್ಯ ಸರಕಾರಗಳು ಲಸಿಕೆಗಾಗಿ ಹಣ ವೆಚ್ಚ ಮಾಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.