ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಇದೇ ಮೊದಲ ಬಾರಿ ಜೊತೆಯಾಗಿ ನಟಿಸುತ್ತಿರುವ ರಾಧಾ ಶ್ಯಾಮ್ ಚಿತ್ರೀಕರಣದ ವೇಳೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ ಎಂಬ ಗಾಸಿಪ್ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ಭಾರೀ ಬೇಡಿಕೆಯಲ್ಲಿರುವ ಪೂಜಾ ಹೆಗ್ಡೆ ಮತ್ತು ಪ್ರಭಾಸ್ ಮೊದಲ ಬಾರಿ ನಟಿಸುತ್ತಿರುವುದರಿಂದ ಚಿತ್ರದ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ. ಆದರೆ ಇವರಿಬ್ಬರ ನಡುವಿನ ಜಗಳದಿಂದ ಚಿತ್ರದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗಿದೆ.
ಪೂಜಾ ಹೆಗ್ಡೆ ವಿರುದ್ಧ ಪ್ರಭಾಸ್ ಮುನಿಸಿಕೊಳ್ಳಲು ಕಾರಣ ಸೆಟ್ ಗೆ ತಡವಾಗಿ ಬರುತ್ತಿರುವುದು. ಪೂಜಾ ಹೆಗ್ಡೆ ಸೆಟ್ ಗೆ ತಡವಾಗಿ ಬರುತ್ತಿರುವುದರಿಂದ ಇಡೀ ತಂಡ ಅವರಿಗಾಗಿ ಕಾಯುವಂತಾಗಿದೆ. ಆಕೆಗೆ ವೃತ್ತಿಪರತೆ ಇಲ್ಲ ಎಂದು ಪ್ರಭಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಯುವಿ ಕ್ರಿಯೇಷನ್ಸ್, ಇದೊಂದು ಕಾಲ್ಪನಿಕ ಆರೋಪ. ಇಬ್ಬರು ವೃತ್ತಿಪರರಾಗಿದ್ದು, ಉತ್ತಮ ಒಡನಾಟವಿದೆ. ಪೂಜಾ ಹೆಗ್ಡೆ ಸಮಯಕ್ಕೆ ಸರಿಯಾಗಿ ಸೆಟ್ ಗೆ ಬರುತ್ತಿದ್ದು, ಯಾವುದೇ ಗೊಂದಲ, ಸಮಸ್ಯೆ ಇಲ್ಲ ಎಂದು ಹೇಳಿದೆ. ಆಕೆ ಜೊತೆ ಕೆಲಸ ಮಾಡುವುದು ಕೂಡ ತುಂಬಾ ಸುಲಭ ಎಂದು ಹೇಳಿದೆ.