ಭಾರತದ ಬೆಸ್ಟ್ ಡ್ಯಾನ್ಸ್ ರ್ ಅಂದ್ರೆ ಅದು ಪಭುದೇವ, ಇವರ ಡ್ಯಾನ್ಸ್ ಎಲ್ಲರಿಗೂ ಸಖತ್ ಇಷ್ಟ. ಇಂಡಿಯನ್ ಮೈಕೆಲ್ ಜಾಕ್ಸನ್ ಪ್ರಭುದೇವ ಸೈಕೋ ಆಗಿದ್ದಾರೆ. ಡ್ಯಾನ್ಸ್ ಮಾಡಿದ್ದು ಸಾಕು ಅಂತ ಹುಡ್ಗೀರ ಜೊತೆ ಡೇಟ್ ಮಾಡ್ತಿದ್ದಾರೆ.

ಹಾಗಂತ ಇದು ರಿಯಲ್ ಲೈಫ್‍ನಲ್ಲಿ ಅಲ್ಲ, ಬರೀ ರೀಲ್‍ನಲ್ಲಿ ಅಷ್ಟೇ.. ಪ್ರಭುದೇವ್ ಆಕ್ಟ್ ಮಾಡಿರೋ ಬಘೀರ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಆ ಟ್ರೇಲರ್‍ನಲ್ಲಿ ಪ್ರಭುದೇವ್ ಅವ್ರನ್ನ ನೋಡಿದವರೆಲ್ಲ ಬೆಚ್ಚಿ ಬಿದ್ದಿದ್ದಾರೆ.

ಇವ್ರು ನಮ್ ಪ್ರಭುದೇವಾ ಅನ್ನೋ ಮಟ್ಟಿಗೆ ಚೇಂಜ್ ಆಗಿದ್ದಾರೆ. ಸೈಕೋ ಕಿಲ್ಲರ್ ಆಗಿ ಆಕ್ಟ್ ಮಾಡಿರೋ ಪ್ರಭುದೇವ ಡೆಡ್ಲೀ ಲುಕ್ ನಿಜಕ್ಕೂ ಭಯ ಹುಟ್ಟಿಸುವಂತಿದೆ. ಅಧಿಕ್ ರವಿಚಂದ್ರನ್ ಈ ಚಿತ್ರವನ್ನ ನಿರ್ದೇಶಿಸಿದ್ದು, ಸೋನಿಯಾ ಅಗರ್‍ವಾಲ್, ಸಾಕ್ಷಿ ಅಗರ್‍ವಾಲ್, ರಮ್ಯ ನಂಬೀಸನ್, ಸಂಚಿತಾ ಶೆಟ್ಟಿ ಸೇರಿದಂತೆ ಹಲವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.