ಬಿಗ್ ಬಾಸ್ ರಿಯಾಲಿಟಿ ಶೋದಿಂದ ಕಿರುತೆರೆ ನಟಿ ಪ್ರಿಯಾಂಕ ತಿಮ್ಮೇಶ್ ಹೊರಬಿದ್ದಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಇಂದು ಅಧಿಕೃತ ಘೋಷಣೆ ಮಾಡಲಿದ್ದಾರೆ.
ವೈಲ್ಡ್ ಕಾರ್ಡ್ ಪ್ರವೇಶ ಪಡೆದು ಬಿಗ್ ಬಾಸ್-8 ಮನೆಗೆ ಬಂದಿದ್ದ ಪ್ರಿಯಾಂಕ ತಿಮ್ಮೇಶ್, ಎರಡನೇ ಇನಿಂಗ್ಸ್ ನಲ್ಲೂ ಉತ್ತಮವಾಗಿ ಆಡಿದ್ದರು. ಆದರೆ ಟಾಸ್ಕ್ ಸೋತ ತಂಡ ಇಡೀ ತಂಡ ನಾಮಿನೇಟ್ ಆಗಿದ್ದರಿಂದ ಪ್ರಿಯಾಂಕ ಅತಿ ಕಡಿಮೆ ಮತ ಪಡೆದು ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.
ಪ್ರಿಯಾಂಕ ತಿಮ್ಮೇಶ್ 50 ದಿನಗಳ ಪೂರೈಸಿದ್ದೇ ದೊಡ್ಡದು ಎಂಬ ಮಾತಿದೆ. ಪತ್ರಕರ್ತ ಚಕ್ರವರ್ತಿ ಜೊತೆಗೆ ಆರಂಭದಲ್ಲಿ ಉತ್ತಮ ಗೆಳೆತನ ಹೊಂದಿದ್ದ ಪ್ರಿಯಾಂಕ ಎರಡನೇ ಇನಿಂಗ್ಸ್ ನಂತರ ಘರ್ಷಣೆಗೆ ಇಳಿದಿದ್ದು, ಪದೇ ಪದೆ ಅವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಇಬ್ಬರು ಮಾತು ಬಿಟ್ಟಿದ್ದರು.