ಸಾಹಿತಿ ಕೆ.ಎಸ್.ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ

ಬೆಂಗಳೂರು : ಸಾಹಿತಿ ಕೆ.ಎಸ್. ಭಗವಾನ್ ಅವರ ಮುಖಕ್ಕೆ ನ್ಯಾಯವಾಧಿಯೊಬ್ಬರು ಮಸಿ ಬಳಿದ ಘಟನೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ಗುರುವಾರ ನಡೆದಿದೆ.
ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಸಾಹಿತಿ ಕೋರ್ಟ್ ಗೆ ವಿಚಾರಣೆಗಾಗಿ ಬಂದಾಗ ಈ ಘಟನೆ ನಡೆದಿದ್ದು, ವಕೀಲೆ ಮೀರಾ ಅವರು ಭಗವಾನ್ ಮುಖಕ್ಕೆ ಮಸಿ ಬಳಿದಿದ್ದಾರೆ. ಹಿಂದು ಧರ್ಮಕ್ಕೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಮೀರಾ ರಾಘವೇಂದ್ರ ಅವರು ಖಾಸಗಿ ದೂರು ದಾಖಲು ಮಾಡಿದ್ದರು.
ಆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯ ಭಗವಾನ್ ಅವರಿಗೆ ಜಾಮೀನು ಮಂಜೂರು ಮಾಡಿತು. ಇದಾದ ಬಳಿಕ ಭಗವಾನ್ ಅವರು ನ್ಯಾಯಾಲಯದಿಂದ ಹೊರಗೆ ಬಂದ ಬಳಿಕ ಮೀರಾ ಅವರು ಮಸಿ ಬಳಿದರು. ಭಗವಾನ್ ಅವರಿಗೆ ಜಾಮೀನು ಮಂಜೂರಾದ ಬಳಿಕ ವಕೀಲೆಯೊಬ್ಬರು ಮಸಿ ಬಳಿದಿರುವುದು ಸಂಬಂಧ ಸಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳಾಗುತ್ತಿದೆ.
ಇನ್ನು ತನ್ನ ಮೇಲೆ ಮಸಿ ಬಳೆದ ವಕೀಲೆ ಮೀರಾ ರಾಘವೇಂದ್ರ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ ಐ ಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 341(ಅಕ್ರಮವಾಗಿ ತಡೆಯುವುದು), 504 (ಅವಾಶ್ಚವಾಗಿ ನಿಂದನೆ) ಅಡಿ ಪ್ರಕರಣ ದಾಖಲಾಗಿದೆ.