ಕಳೆದ 18 ತಿಂಗಳಿನಿಂದ ಬಂದ್ ಆಗಿದ್ದ ಪದವಿ ಪೂರ್ವ ಕಾಲೇಜುಗಳು ಆರಂಭವಾಗಿದ್ದು ಪೋಷಕರಿಗೂ ಮತ್ತು ಮಕ್ಕಳಿಗೂ ಒಂದ್ ಕಡೆ ಖುಷಿ ತಂದಿದ್ರೆ ಇನ್ನೊಂದೆಡೆ ಕಾಲೇಜು ಪ್ರಾರಂಭವಾಗುತ್ತಿದ್ದಂತೆ ಶುಲ್ಕ ಏರಿಕೆಯ ಹೊಡೆತಕ್ಕೆ ಪೋಷಕರು ನಲುಗಿದ್ದಾರೆ.
ಕೋವಿಡ್ 1ನೇ ಮತ್ತು 2ನೇ ಅಲೆಯಿಂದ ಜನರ ಜೀವನ ಅಸ್ತವ್ಯಸ್ತವಾಗಿ ಸಂಕಷ್ಟಕ್ಕೆ ಸಿಲುಕಿ ಕೆಲಸ ಕಳೆದುಕೊಂಡಿರುವ ಪೋಷಕರು. ಈ ನಡುವೆಯೇ ಪಿಯುಸಿ ಹಾಗೂ ಪದವಿ ಕೋರ್ಸ್ ಗಳಿಗೆ ಖಾಸಗಿ ಪಿಯು ಕಾಲೇಜುಗಳು.ಶೇ.35 ರಿಂದ 40ರಷ್ಟು ಶುಲ್ಕ ಹೆಚ್ಚಳ ಮಾಡಿವೆ.
ಶುಲ್ಕ ಹೆಚ್ಚಳಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ನೆಪ ಹೇಳುತ್ತಿರುವ ಶಿಕ್ಷಣ ಸಂಸ್ಥೆಗಳು. ಈಗಾಗಲೇ ಇಲಾಖೆಗೆ ನೂರಾರು ಸಂಖ್ಯೆಯಲ್ಲಿ ಪೋಷಕರು ದೂರು ಸಲ್ಲಿಕೆ ಮಾಡಿದ್ದು, ಶಿಕ್ಷಣ ಸಚಿವ ಬಿಸಿ ನಾಗೇಶ್ ಗೂ ಪೋಷಕರಿಂದ ಮೌಖಿಕ ದೂರು ಸಲ್ಲಿಕೆಯಾಗಿದೆ. ಜಿಲ್ಲಾ ಡಿಡಿಪಿಐ ಹಾಗೂ ಪಿಯು ನಿರ್ದೇಶಕರಿಂದ ಹೆಚ್ಚುವರಿ ಶುಲ್ಕ ಕಾಲೇಜುಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಿ ಹೆಚ್ಚುವರಿ ಶುಲ್ಕ ಪಡೆಯುತ್ತಿರುವ ಕಾಲೇಜುಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಚಿವ ಬಿಸಿ ನಾಗೇಶ್ ಎಚ್ಚರಿಕೆ ನೀಡಿದ್ದಾರೆ.