ದ್ವಿತೀಯ ಪಿಯುಸಿ ಎಲ್ಲಾ ರಿಪಿಟರ್ಸ್ ವಿದ್ಯಾರ್ಥಿಗಳಿಗೆ ಕನಿಷ್ಠ ಅಂಕ ನೀಡಿ ಪಾಸ್ ಮಾಡುವುದಾಗಿ ರಾಜ್ಯ ಸರಕಾರ ಹೈಕೊರ್ಟ್ ಗೆ ತಿಳಿಸಿದೆ. ಈ ಮೂಲಕ ಅತಂತ್ರ ಸ್ಥಿತಿಯಲ್ಲಿದ್ದ ರಿಪಿಟರ್ಸ್ ವಿದ್ಯಾರ್ಥಿಗಳು ನಿರಾಳರಾಗಿದ್ದಾರೆ.
ದ್ವಿತೀಯ ಪಿಯುಸಿ ರಿಪಿಟರ್ಸ್ ನಲ್ಲಿ 76,000 ವಿದ್ಯಾರ್ಥಿಗಳಿದ್ದು ತಜ್ಞರ ವರದಿ ಆಧರಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಕನಿಷ್ಠ 35ರಷ್ಟು ಅಂಕ ನೀಡಿ ಪಾಸ್ ಮಾಡಲು ನಿರ್ಧರಿಸಲಾಗಿದೆ ಎಂದು ಸರಕಾರ ತಿಳಿಸಿದೆ.
ಆಗಸ್ಟ್ 31ಕ್ಕೆ ಪರೀಕ್ಷೆ ನಡೆಸಿ ಸೆಪ್ಟೆಂಬರ್ 20ಕ್ಕೆ ಫಲಿತಾಂಶ ಪ್ರಕಟಿಸುವ ಯೋಜನೆ ಹೊಂದಿದ್ದೇವೆ ಎಂದು ಸರಕಾರ ಹೈಕೋರ್ಟ್ ಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ.