ಲವ್ ಯು ರಚ್ಚು ಚಿತ್ರೀಕರಣದ ವೇಳೆ ಸಂಭವಿಸಿದ ದುರಂತ ಪ್ರಕರಣದಲ್ಲಿ ನಟ ಅಜಯ್ ರಾವ್, ನಿರ್ದೇಶಕ ಶಂಕರ್ ಸೇರಿದಂತೆ ನಾಲ್ವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ರಾಮನಗರದ 3ನೇ ಅಪಾರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ದಲಿಂಗಪ್ರಭು 6 ಮಂದಿಗೆ ಜಾಮೀನು ಮಂಜೂರು ಮಾಡಿದರು.
ನಟ ಅಜಯ್ ರಾವ್, ನಿರ್ದೇಶಕ ಶಂಕರ್, ಕ್ರೇನ್ ಆಪರೇಟರ್ ಮಹದೇವ್, ಸಾಹಸ ನಿರ್ದೇಶಕ ವಿನೋದ್ ಕುಮಾರ್, ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡೀಸ್, ನಿರ್ಮಾಪಕ ಗುರುದೇಶಪಾಂಡೆ ಗೂ ಜಾಮೀನು ಮಂಜೂರು ಮಾಡಲಾಗಿದೆ.
ಜೋಗರಪಾಳ್ಯ ಗ್ರಾಮದಲ್ಲಿ ಚಿತ್ರೀಕರಣ ವೇಳೆ ಸಾಹಸ ಕಲಾವಿದ ವಿವೇಕ್ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ನಟ ಅಜಯ್ ರಾವ್ ಅವರನ್ನು ಹೊರತುಪಡಿಸಿ ಮೂವರನ್ನು ಬಂಧಿಸಲಾಗಿತ್ತು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.