ಬುಲ್‍ಬುಲ್ ಮಾತಾಡಿಕಿಲ್ವಾ ಅಂತಾ ರೆಬೆಲ್ ಸ್ಟಾರ್ ಬಣ್ಣದ ಲೋಕಕ್ಕೆ ಕಾಲಿಟ್ರೆ, ಗಂಧದ ಗುಡಿಗೆ ಬುಲ್‍ಬುಲ್ ಆಗಿ ಬಲಗಾಲಿಟ್ಟುಬಂದವ್ರು ಡಿಂಪಲ್ ಕ್ವೀನ್ ರಚಿತಾರಾಮ್. ಅದೇ ಬುಲ್ ಬುಲ್ ಹುಡುಗಿ ಜ್ಯೂ.ಜಲೀಲಾಗೆ ಜೋಡಿಯಾಗಿದ್ದಾರೆ. ಅದರ ಸಾರಥ್ಯ ವಹಿಸಿರೋದು ರಾ ಡೈರೆಕ್ಟರ್ ದುನಿಯಾ ಸೂರಿ ಅವರು.

ದುನಿಯಾ ಸೂರಿ ಹಾಗೂ ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಒಂದಾಗ್ತಿದ್ದಾರೆ ಅಂದಾಗ್ಲೇ ಗಾಂಧಿನಗರದ ಮಂದಿ ಅತ್ತ ಬೆರಗು ಗಣ್ಣಿನಿಂದ ನೋಡಿದ್ರು. ಹೀಗಿರುವಾಗ್ಲೇ ಈ ಬ್ಯಾಡ್ ಮ್ಯಾನರ್ಸ್‍ಗೆ ಯಾರ್ ನಾಯಕಿಯಾಗ್ತಾರೆ ಅನ್ನೋ ಕುತೂಹಲವಿತ್ತು, ಅದಕ್ಕೆಲ್ಲಾ ಈಗ ತೆರೆ ಬಿದ್ದಂತಾಗಿದೆ. ಅಭಿಯ ಮೊದಲ ಸಿನಿಮಾದ ಒಂದು ಸಾಂಗ್ ನಲ್ಲಿ ರಚಿತಾ ಕಾಣಿಸಿಕೊಂಡಿದ್ರು, ಆಗ್ಲೇ ಇವರಿಬ್ರು ತೆರೆ ಮೇಲೆ ರೊಮ್ಯಾನ್ಸ್ ಮಾಡಿದ್ರೆ ಹೇಗಿರ್ಬಹುದು ಅನ್ನೋ ಕುತೂಹಲ ಸಿನಿ ಅಭಿಮಾನಿಗಳಲ್ಲಿತ್ತು.

ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಮತ್ತೊಬ್ಬ ನಾಯಕಿ ನಟಿಯಾಗಿ ಸ್ಯಾಂಡಲ್‍ವುಡ್ ಗೆ ಹೊಸಮುಖದ ಪರಿಚಯವಾಗುತ್ತಿದೆ. ಮೈಸೂರು ಹುಡುಗಿ ಪ್ರಿಯಾಂಕಾ ಈಗಾಗ್ಲೇ ಸೀರಿಯಲ್ ಗಳಲ್ಲಿ ಅಭಿನಯಿಸಿ ಸೈ ಅನ್ನಿಸಿಕೊಂಡಿದ್ದಾರೆ. ಪ್ರಿಯಾಂಕಾಗೆ ಬ್ಯಾಡ್ ಮ್ಯಾನರ್ಸ್ ನಲ್ಲಿ ಚಾನ್ಸ್ ಸಿಕ್ಕಿರೋದು ಲಡ್ಡು ಬಂದು ಬಾಯಿಗೆ ಬಿದ್ದಂತಾಗಿದೆ. ಈ ಚಿತ್ರ ಪ್ರಿಯಾಂಕಾಗೆ ಸ್ಯಾಂಡಲ್‍ವುಡ್ ನಲ್ಲಿ ಒಳ್ಳೆಯ ಅಡಿಪಾಯ ಹಾಕಿರೋದಂತು ಸುಳ್ಳಲ್ಲಾ.

ಸದ್ಯ ಬ್ಯಾಡ್ ಮ್ಯಾನರ್ಸ್ ತಂಡ ಭರ್ಜರಿಯಾಗಿ ಶೂಟಿಂಗ್ ಮಾಡ್ತಿದ್ದು, ಕೆಲವೇ ದಿನಗಳಲ್ಲಿ ಈ ಇಬ್ಬರು ನಾಯಕಿಯರು ಚಿತ್ರತಂಡ ಸೇರಿಕೊಳ್ಳಲಿದ್ದಾರೆ.. ತೆರೆ ಮೇಲೆ ರಚ್ಚು-ಅಭಿ ಕಾಂಬಿನೇಷನ್ ಹೇಗೆ ವರ್ಕ್‍ಔಟ್ ಆಗಲಿದೆ. ಪ್ರಿಯಾಂಕ ಫರ್ಪಾಮೆನ್ಸ್ ಹೇಗಿರೆಲಿದೆ ಅನ್ನೋ ಕುತೂಹಲ ಮೂಡಿಸಿದೆ.