ರಾಯಚೂರು : ವಾಹನಗಳ ಸರಣಿ ಅಪಘಾತದಲ್ಲಿ ಮಕ್ಕಳಿಬ್ಬರು ಮೃತ ಪಟ್ಟ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೊಲಪಲ್ಲಿ ಬಳಿ ನಡೆದಿದೆ.
ಸರಣಿ ಅಪಘಾತ ಸಂಭವಿಸಿ ಕಾರ್‌ನಲ್ಲಿದ್ದ ಇಬ್ಬರ ಮಕ್ಕಳು ಸ್ಥಳದಲ್ಲೇ ಸ್ವಾನ್ನಪ್ಪಿದ್ದು, ತಂದೆ-ತಾಯಿ ಗಾಯ ಗೊಂಡಿದ್ದಾರೆ. ಮೃತರನ್ನು ಭುವನ್(೧೬), ಹರ್ಷಿತಾ (೧೮) ಎಂದು ತಿಳಿದು ಬಂದಿದ್ದು ದೇವದುರ್ಗ ತಾಲೂಕಿನವರೆಂದು ಗುರುತಿಸಲಾಗಿದೆ.
ದೇವದುರ್ಗದಿಂದ ದಾವಣಗೆರೆಗೆ ಮಕ್ಕಳಿಬ್ಬರನ್ನ ಶಾಲಾ ಅಡ್ಮಿಷನ್ ಮಾಡಲು ಕಾರ್ ನಲ್ಲಿ ಹೋಗುತ್ತಿದ್ದರು. ಮಾರ್ಗ ಮಧ್ಯ ಗೊಲಪಲ್ಲಿ ಬಳಿ ಹಿಂದುಗಡೆಯಿಂದ ಬರುತ್ತಿದ್ದ ಸಿಮೆಂಟ್ ಟ್ಯಾಂಕರ್ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮಕ್ಕಳಿಬ್ಬರು ಸ್ವಾನ್ನಪ್ಪಿದ್ದು,, ತಂದೆ-ತಾಯಿ ಇಬ್ಬರು ಗಾಯಗೊಂಡಿದ್ದಾರೆ.
ಸ್ಥಳಕ್ಕೆ ಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೆವರ್ಗಿ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದ್ದರಿಂದ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.