ರಾಯಚೂರು : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ, ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ರಾಯಚೂರಿನಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಶನಿವಾರ ಜಿಲ್ಲೆಯ ರೈತರು ಹೈದ್ರಾಬಾದ್ ಬೈಪಾಸ್ ಬಳಿ ರಾಯಚೂರು-ಲಿಂಗಸುಗೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ, ರೈತ ಕೃಷಿ ಕಾರ್ಮಿಕ ಸಂಘಟನೆ, ಪ್ರಾಂತ ರೈತ ಸಂಘಟನೆ, ಹಸಿರು ಸೇನೆ, ಎಐಡಿಎಸ್ ಒ, ಸಿಐಟಿಯು, ಎಐಕೆಕೆಎಂಎಸ್, ಎಐಯುಟಿಯುಸಿ, ಅಖಿಲ ಭಾರತ ಕಿಶಾನ ಸಭಾ ಸೇರಿದಂತೆ ಮುಂತಾದ ಸಂಘಟನೆಗಳು ಹೆದ್ದಾರಿ ತಡೆಯಲ್ಲಿ ಭಾಗವಹಿಸಿದ್ದವು.
ರೈತ ಸಂಘದ ಮುಖಂಡ ರಾಮದಾಸ್ ಮಾನ್ಪಡೆ ಮಾತನಾಡಿ, ಕಳೆದ 2 ತಿಂಗಳಿಂದ ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದರೆ, ಸರಕಾರದ ಜೊತೆಗೆ 9 ಸುತ್ತಿನ ಮಾತುಕತೆಯೂ ನಡೆದಿದೆ, ಆದ್ರೂ ಸರಕಾರ ಏಕೆ ರೈತರನ್ನು ಕಡೆಗಣಿಸುತ್ತಿದೆ ಎಂದು ಅರ್ಥವಾಗುತ್ತಿಲ್ಲ. ತಕ್ಷಣ ರೈತರ ಸಮಸ್ಯೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.