ರಾಯಚೂರು : ಹೆತ್ತ ಮಗನನ್ನ ಪಾಪಿ ತಂದೆ ಕೊಲೆ ಮಾಡಿರುವ ದಾರುಣ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಲ್ಮಂಗಿಯಲ್ಲಿ ಬಳಿ ಘಟನೆ ನಡೆದಿದೆ.
4 ವರ್ಷದ ಮಹೇಶನನ್ನು ತಂದೆ ಯಲ್ಲಪ್ಪ ಕೊಲೆ ಮಾಡಿದ್ದಾನೆ. ಕೌಟಂಬಿಕ ಕಲಹ ಹಿನ್ನೆಲೆಯಲ್ಲಿ ಯಲಪ್ಪನ ಪತ್ನಿ ಪಾರ್ವತಿ ತವರು ಮನೆ ಹೋಗಿದ್ದಳು. ಹೆಂಡತಿಯ ಊರಿನಿಂದ ಮಗನನ್ನ ಕಿಡ್ನಾಪ್ ಮಾಡಿಕೊಂಡು ಬಂದಿದ್ದ ಯಲ್ಲಪ್ಪ ತನ್ನ ಮಗುವನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.
ಅಲ್ಲದೇ, 2021 ಫೆ.1 ರಂದು ಮಗುವನ್ನ ಕಿಡ್ನಾಪ್ ಮಾಡಿಕೊಂಡು ಬಂದಿದ್ದು, ಮಗು ಕಿಡ್ನಾಪ್ ಆಗಿದ್ದ ಬಗ್ಗೆ ತುರ್ವಿಹಾಳ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಮಗುವನ್ನ ಕತ್ತು ಹಿಸಗಿ ಜಮಿನು ಒಂದರಲ್ಲಿ ಎಸೆಯಲಾಗಿದೆ. ಘಟನೆ ಕುರಿತಂತೆ ತುರುವಿಹಾಳ ಪೊಲೀಸರು ಆರೋಪಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಮಗನ್ನ ಕಳೆದಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.