ರಾಯಚೂರ: ಮೂರ್ನಾಲ್ಕು ವರ್ಷಗಳಿಂದೆಯೇ, ಶುದ್ಧ ಕುಡಿಯುವ ನೀರಿಗಾಗಿ ನಿರ್ಮಸಿದ್ದ ಆರ್ ಓ ಪ್ಲ್ಯಾಂಟ್ ಚಾಲನೆ ಸಿಗದೆ ಹಾಳು ಬಿದ್ದಿದ್ದೆ.
ರಾಯಚೂರಿನ ಇಡಪನೂರು ಗ್ರಾಮದಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರು ಘಟಕ ಉಪಯೋಗವಿಲ್ಲದಂತೆ ಪಾಳು ಬಿದಿದ್ದು, ಶುದ್ಧ ಕುಡಿಯುವ ನೀರು ಇಲ್ಲದಂತಾಗಿದೆ. ಗ್ರಾಮಸ್ಥರಿಗೆ ಶುದ್ಧ ನೀರು ಮತ್ತು ಫ್ಲೋರೈಡ್ ಮುಕ್ತ ನೀರು ಸಿಗುವ ದೊರೆಯಲಿ ಎಂಬ ಉದ್ಧೇಶದಿಂದ ಆರ್ ಓ ಪ್ಲ್ಯಾಂಟ್ ಸ್ಥಾಪಿಸಲಾಗಿತ್ತು. ಆದರೆ 3-4 ವರ್ಷಗಳಿಂದ ಚಾಲನೆ ಸಿಗದೆ ಈಗ ಯಂತ್ರಗಳು ತುಕ್ಕು ಹಿಡಿದಿವೆ. ಕಟ್ಟಡವು ದುರಸ್ತಿ ಹಂತಕ್ಕೆ ತಲುಪಿದ್ದು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಆರ್ ಓ ಫ್ಲ್ಯಾಂಟ್ ಚಾಲನೆ ನೀಡಬೇಕು ಎನ್ನುವುದು ಗ್ರಾಮಸ್ಥರ ಒತ್ತಾಸೆಯಾಗಿದೆ.