ರಾಯಚೂರು: ಟಾಟಾ ಏಸ್-ಬೈಕ್ ಮುಖಾಮುಖಿ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಲಿಂಗಸೂರು ತಾಲ್ಲೂಕಿನ ರೋಡಲಬಂಡ ಕ್ರಾಸ್ ಬಳಿ ನಡೆದಿದೆ.
ಹಟ್ಟಿಯಿಂದ ಸಿರವಾರ ತಾಲೂಕಿನ ಹೀರಾ ಗ್ರಾಮಕ್ಕೆ ಹೋಗುತ್ತಿದ್ದ ಟಾಟಾ ಏಸ್ ವಾಹನ ಹಟ್ಟಿ ಮಾರ್ಗವಾಗಿ ಬರುತ್ತಿದ್ದ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರಿನಿಗೆ ಗಂಭೀರವಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಮೃಟ್ಟಪಟ್ಟಿದ್ದಾನೆ. ಟಾಟಾ ಏಸ್ ನಲ್ಲಿ ೧೫ ಜನಕ್ಕಿಂತ ಹೆಚ್ಚು ಪ್ರಯಾಣಿಸುತ್ತಿದ್ದರು. ಡಿಕ್ಕಿ ಹೊಡೆದು ರಭಸಕ್ಕೆ ವಾಹನ ಹೊಲದಲ್ಲಿ ಪಲ್ಟಿಯಾಗಿದ್ದು, ಅದರಲ್ಲಿ ಇಬ್ಬರು ಪ್ರಯಾಣಿಕರಿಗೆ ಗಂಭೀರವಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಹಟ್ಟಿ ಪೋಲಿಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಹಟ್ಟಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.