ಬಾಲಿವುಡ್ ನಟಿ ಹಾಗೂ ನಿರೂಪಕಿ ಮಂದಿರಾ ಬೇಡಿ ಪತಿ ಹಾಗೂ ಫಿಲ್ಮ್ ಮೇಕರ್ ರಾಜ್ ಕುಶಾಲ್ (49) ನಿಧನರಾಗಿದ್ದು, ಅಕಾಲಿಕ ನಿಧನದಿಂದ ಬಾಲಿವುಡ್ ಆಘಾತಕ್ಕೆ ಒಳಗಾಗಿದೆ.
ಬರಹಗಾರ, ನಿರ್ದೇಶಕ ಹಾಗೂ ನಿರ್ಮಾಪಕರಾಗಿದ್ದ ರಾಜ್ ಕುಶಾಲ್ ಬುಧವಾರ ಮುಂಜಾನೆ 4.30ರ ಸುಮಾರಿಗೆ ಹೃದಯಾಘಾತರದಿಂದ ಮೃತಪಟ್ಟರು.
ರಾಜ್ ಕುಶಾಲ್ ಮನೆಯಲ್ಲೇ ಇದ್ದಿದ್ದರಿಂದ ಯಾವುದೇ ರೀತಿಯ ವೈದ್ಯಕೀಯ ನೆರವು ಲಭಿಸಬಹುದಿತ್ತು. ಆದರೆ ಆ ಕ್ಷಣದಲ್ಲಿ ಸಾಧ್ಯವಾಗಲಿಲ್ಲ. ರಾಜ್ ಕುಶಾಲ್ ಪತ್ನಿ ಮಂದಿರಾ ಬೇಡಿ, ಮಕ್ಕಳರಾದ ವೀರ್ ಮತ್ತು ತಾರಾ ಅವರನ್ನು ಅಗಲಿದ್ದಾರೆ. ಮುಂಬೈನಲ್ಲಿ ಮಧ್ಯಾಹ್ನದ ನಂತರ ಅಂತ್ಯಕ್ರಿಯೆ ನಡೆಯಲಿದೆ.