ರಜನಿ ಮಕ್ಕಳ್ ಮಂಡ್ರಮ್ ಪಕ್ಷ ವಿಸರ್ಜಿಸುವ ಮೂಲಕ ಬಹುಭಾಷಾ ನಟ ರಜನಿಕಾಂತ್ ಅಧಿಕೃತವಾಗಿ ರಾಜಕೀಯಕ್ಕೆ ವಿದಾಯ ಘೋಷಿಸಿದ್ದಾರೆ.
ಅನಾರೊಗ್ಯದಿಂದ ಬಳಲುತ್ತಿರುವ ರಜನಿಕಾಂತ್ ಕಳೆದ ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ಘೋಷಿಸಿದ್ದ ರಜನಿಕಾಂತ್ ಸೋಮವಾರ ಅಧಿಕೃತವಾಗಿ ಪಕ್ಷವನ್ನು ವಿಸರ್ಜಿಸಿದರು. ಈ ಮೂಲಕ ರಾಜಕೀಯದಿಂದ ದೂರ ಉಳಿಯುವ ತಮ್ಮ ನಿರ್ಧಾರಕ್ಕೆ ಕಾನೂನಾತ್ಮಕ ಅಂತ್ಯ ಹಾಡಿದರು.
ಅನಾರೋಗ್ಯದ ಕಾರಣ ವೈದ್ಯಕೀಯ ತಪಾಸಣೆಗೆ ಅಮೆರಿಕಕ್ಕೆ ತೆರಳಿದ್ದ ರಜನಿಕಾಂತ್ ಕೆಲವು ವಾರಗಳ ವಿಶ್ರಾಂತಿ ಪಡೆದ ನಂತರ ತಮಿಳುನಾಡಿಗೆ ಮರಳಿದ್ದರು. ತವರಿಗೆ ಮರಳಿದ ಬೆನ್ನಲ್ಲೇ ತಾವು ಸ್ಥಪಿಸಿದ್ದ ಪಕ್ಷವನ್ನು ಅಧಿಕೃತವಾಗಿ ವಿಸರ್ಜಿಸಿದರು.
ನಾನು ಇನ್ನೆಂದು ರಾಜಕೀಯ ಪ್ರವೇಶಿಸುವುದಿಲ್ಲ. ಈಗ ಸ್ಥಾಪಿಸಿದ್ದ ಪಕ್ಷ ಅಭಿಮಾನಿಗಳಿಗಾಗಿ ಫ್ಯಾನ್ ಕ್ಲಬ್ ಆಗಿ ಉಳಿಯಲಿದೆ ಎಂದು ರಜನಿಕಾಂತ್ ಸ್ಪಷ್ಟಪಡಿಸಿದರು.