ರಾಜ್ಯಸಭೆ(Rajyasabha ) ಅಭ್ಯರ್ಥಿಗಳ ಬಗ್ಗೆ ವರಿಷ್ಠರು ಶೀಘ್ರದಲ್ಲೇ ನಿರ್ಧರಿಸ್ತಾರೆ . ಬಿಜೆಪಿ ( bjp )ಎರಡು ಸ್ಥಾನ ಗೆಲ್ಲುವ ಅವಕಾಶ ನಮಗಿದೆ ಎಂದು ಸಿಎಂ ಬೊಮ್ಮಾಯಿ ( Bommai ) ಹೇಳಿದ್ದಾರೆ .
ಬೆಂಗಳೂರಿನಲ್ಲಿ (bengaluru ) ಮಾತನಾಡಿದ ಅವರು, ಮೂರನೇ ಅಭ್ಯರ್ಥಿ ಇಳಿಸುವ ಬಗ್ಗೆ ಇಂದು ನಿರ್ಧಾರ ಆಗುತ್ತೆ ಬೇರೆ ಪಕ್ಷಗಳು ಮೂರನೇ ಅಭ್ಯರ್ಥಿ ಹಾಕ್ತಾರಾ ಇಲ್ವಾ ಅಂತನೂ ಗಮನಿಸ್ತಿದ್ದೇವೆ . ರಾಜ್ಯದಲ್ಲಿ ಏನೇನಾಗ್ತಿದೆ ಅಂತ ವರಿಷ್ಠರಿಗೆ ತಿಳಿಸಿದ್ದೇವೆ . ನಾಡಗೀತೆ ತಿರುಚಿ ಹೇಳಿದ ರೋಹಿತ್ ಚಕ್ರತೀರ್ಥ ( Rohith chakravarthi ) ವಿರುದ್ಧ ಸೈಬರ್ ದೂರು ದಾಖಲಿಸಲು ಆಗ್ರಹಿಸಿ ನಿರ್ಮಲಾನಂದಶ್ರೀಗಳು (nirmalanandasri swamiji ) ಪತ್ರ ಬರೆದಿದ್ದಾರೆ . ನಿರ್ಮಲಾನಂದ ಶ್ರೀಗಳ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇವತ್ತು ಶಿಕ್ಷಣ ಸಚಿವರ ಜತೆ ಚರ್ಚೆ ಮಾಡ್ತೇನೆ . ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ರು . ಇದನ್ನೂ ಓದಿ : – ಬಿಜೆಪಿ ವಿರುದ್ದ ಕಿಡಿಕಾರಿದ ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ