ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷ ರಾಮಯ್ಯ ಮುಂದುವರಿಯಲಿದ್ದಾರೆ ಎಂದು ಹೈಕಮಾಂಡ್ ಸೂಚನೆ ನೀಡಿದ್ದು, ಇದರಿಂದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಕುರಿತು ಹಿರಿಯ ನಾಯಕರ ಕಿತ್ತಾಟಕ್ಕೆ ಬ್ರೇಕ್ ಬಿದ್ದಂತಾಗಿದೆ.
ಯೂತ್ ಕಾಂಗ್ರೆಸ್ ಅಧಿಕೃತ ವೆಬ್ ಸೈಟ್ ನಲ್ಲಿ ರಕ್ಷ ರಾಮಯ್ಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಪ್ರಕಟಿಸಲಾಗಿದೆ. ಈ ಮೂಲಕ ನಲಪಾಡ್ ಹ್ಯಾರಿಸ್ ಬೆಂಬಲಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಡೆಗೆ ಹಿನ್ನಡೆ ಉಂಟಾದಂತೆ ಆಗಿದೆ.
ಕಾಂಗ್ರೆಸ್ ಹಿರಿಯ ಮುಖಂಡ ಕೆಬಿ ಕೋಳಿವಾಡ್ ಕೂಡ ಅಧಿಕೃತ ಘೋಷಣೆಗೂ ಮುನ್ನ ರಕ್ಷ ರಾಮಯ್ಯ ಅವರನ್ನು ಈ ಹಿಂದೆಯೇ ಹೈಕಮಾಂಡ್ ಅಧ್ಯಕ್ಷರಾಗಿ ಚುನಾವಣೆ ನಂತರ ಘೋಷಿಸಿರುವುದರಿಂದ ಅವರೇ ಮುಂದುವರಿಯಲಿ ಎಂದು ಹೇಳಿಕೆ ನೀಡಿದ್ದರು.