ಹೊಸ ಹುಡುಗಿಯ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡ ನಟ ರಕ್ಷಿತ್ ಶೆಟ್ಟಿ!

ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ತಮ್ಮ ಮುಂದಿನ ಚಿತ್ರಕ್ಕೆ ಸಿಕ್ಕ ನಾಯಕಿಯ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸಪ್ತಸಾಗರದಾಚೆ ಎಲ್ಲೋ ಚಿತ್ರಕ್ಕೆ ಆಯ್ಕೆಯಾದ ರುಕ್ಮಿಣಿ ವಸಂತ್ ಅವರ ಬಗ್ಗೆ ಸಿಂಪಲ್ ಸ್ಟಾರ್ ಮಾಹಿತಿ ನೀಡಿದ್ದಾರೆ. ರಕ್ಷಿತ್ ಶೆಟ್ಟಿ ನಟನೆಯ ಸಿನಿಮಾಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಆಯ್ಕೆಯಾಗಿದ್ದಾರೆ.

2019ರಲ್ಲಿ ಬಿಡುಗಡೆಯಾದ ಬೀರಬಲ್ ಚಿತ್ರದ ಮೂಲಕ ನಟಿ ರುಕ್ಮಿಣಿ ವಸಂತ್ ಗಮನ ಸೆಳೆದಿದ್ದರು. ಸಪ್ತಸಾಗರದಾಚೆ ಎಲ್ಲೋ ಚಿತ್ರದ ಫಸ್ಟ್ ಲುಕ್ ನನಗೆ ತುಂಬಾ ಇಷ್ಟವಾಗಿತ್ತು. ಹೀಗಾಗಿ ನಾನು ನಿರ್ದೇಶಕ ಹೇಮಂತ್ ರಾವ್ ಅವರನ್ನು ಸಂಪರ್ಕಿಸಿದ್ದೆ. ಬಳಿಕ ಅವರು ಒಮ್ಮೆ ಆಡೀಷನ್ ಗೆ ಕರೆದು ಲುಕ್ ಟೆಸ್ಟ್ ಮಾಡಿದ್ದರು. ಇದೀಗ ಚಿತ್ರತಂಡ ನನ್ನನ್ನು ನಾಯಕಿಯಾಗಿ ಆಯ್ಕೆ ಮಾಡಿದೆ. ಈ ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ಹವ್ಯಾಸಿ ಗಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ರಕ್ಷಿತ್ ಶೆಟ್ಟಿ ಮತ್ತು ಹೇಮಂತ್ ರಾವ್ ಅವರೊಂದಿಗೆ ಕೆಲಸ ಮಾಡುತ್ತಿರುವುದು ಖುಷಿ ನೀಡಿದೆ ಎಂದು ರುಕ್ಮಿಣಿ ವಸಂತ್ ಹೇಳಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಚಿತ್ರಕ್ಕೆ ಅದ್ವೈತ್ ಗುರುಮೂರ್ತಿ ಛಾಯಾಗ್ರಹಣವಿದ್ದು ಚರಣ ರಾಜ್ ಸಂಗೀತ ನೀಡಿದ್ದಾರೆ. ರುಕ್ಮಿಣಿ ವಸಂತ್ ಆಡೀಷನ್ ನಲ್ಲಿ ಚೆನ್ನಾಗಿ ನಟಿಸಿದ್ದರು. ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ಅವರು ಹೇಳಿ ಮಾಡಿಸಿದಂತೆ ಕಂಡರು. ರುಕ್ಮಿಣಿ ಅವರು ಕ್ಲಾಸಿಕ್ ನಟಿಯಂತೆ ಕಾಣುತ್ತಾರೆ. ಇದೊಂದು ಲವ್ ಥ್ರಿಲ್ಲರ್ ಜಾನರ್ ಸಿನಿಮಾ ಎಂದು ನಿರ್ದೇಶಕ ಹೇಮಂತ್ ರಾವ್ ಹೇಳಿದ್ದಾರೆ.