ಉಳಿದವರು ಕಂಡಂತೆ ಚಿತ್ರದ ಮೂಲಕ ನಿರ್ದೇಶನ ಆರಂಭಿಸಿದ್ದ ನಟ ರಕ್ಷಿತ್ ಶೆಟ್ಟಿ 7 ವರ್ಷದ ನಂತರ ಮತ್ತೆ ನಿರ್ದೇಶನದ ಕ್ಯಾಪ್ ಧರಿಸಲಿದ್ದಾರೆ.
ಕೆಜಿಎಫ್-1 ಮತ್ತು ಕೆಜಿಎಫ್-2 ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ಹೊಂಬಾಳೆ ಫಿಲಮ್ಸ್ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ರಕ್ಷಿತ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ. ರಿಚರ್ಡ್ ಆಂಟನಿ- ಕಿಂಗ್ ಆಫ್ ಸೀ (ಸಮುದ್ರ ರಾಜ) ಎಂದು ಈ ಚಿತ್ರಕ್ಕೆ ಹೆಸರಿಡಲಾಗಿದೆ.
ಸ್ವತಃ ರಕ್ಷಿತ್ ಶೆಟ್ಟಿ ಹಾಗೂ ನಿರ್ಮಾಪಕ ವಿಜಯ್ ಕಿರಂಗದೂರು ಟ್ವಿಟರ್ ನಲ್ಲಿ ಭಾನುವಾರ ಹೊಸ ಚಿತ್ರದ ಘೋಷಣೆ ಮಾಡಿದ್ದೂ ಅಲ್ಲದೇ ಪ್ರೊಮೊ ಬಿಡುಗಡೆ ಮಾಡಿದ್ದಾರೆ.
ಮೊದಲು ಕೆಲಸ ಮಾತನಾಡಲಿ, ಉಳಿದವೆಲ್ಲ ಅನಂತರ…ರಿಚರ್ಡ್ ಅಂಟನಿ ಮುಂದಿನ ಅಲೆ.. ಹೃದಯದ ಜಾಗದಲ್ಲಿ ದವಿರಿಸಿ. ಸದಾ ನಿಮ್ಮ ಪ್ರೀತಿಯ ಆಶೀರ್ವಾದವಿರಲಿ ಎಂದು ರಕ್ಷಿತ್ ಟ್ವಿಟ್ ಮಾಡಿದ್ದಾರೆ.