ಮೋಜಿಗಾಗಿ ಬಾವಿಗೆ ನೂಕಿದ ಸ್ನೇಹಿತರು, ಈಜು ಬಾರದೆ ಪ್ರಾಣ ಕಳೆದುಕೊಂಡ ಯುವಕ
ರಾಮನಗರ: ತಾಲೂಕಿನ ತಗಚ್ಚಕುಪ್ಪೆ ಗ್ರಾಮದಲ್ಲಿ ಸ್ನೇಹಿತನನ್ನು ಬಾವಿಗೆ ನೂಕಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಂತೆ ಈಜೂ ಬಾರದೆ ನೀರಿನಲ್ಲಿ ಮುಳುಗಿ ಯುವಕ ಸಾವಿಗೀಡಾಗಿರುವ ಘಟನೆ ನಡೆದಿದೆ. ಹೆಬ್ಬೂರು ಮೂಲದ 27 ವರ್ಷದ ಲಕ್ಷ್ಮಿಕಾಂತ್ ಮೃತ ಯುವಕನಾಗಿದ್ದು ಈತ ಮಾಚೋಹಳ್ಳಿ ಅದೀಶ್ವರ್ ಕಂಪನಿಯಲ್ಲಿ ಎಕ್ಸ್ಯೂಕ್ಯೂಟಿವ್ ಆಗಿ ಕೆಲಸ ಮಾಡತ್ತಿದ್ದ. ಕೆಲಸಕ್ಕೆ ರಜೆ ಹಾಕಿ ಪಾರ್ಟಿ ಮುಗಿಸಿ ಮಾಗಡಿ-ಬೆಂಗಳೂರು ಮುಖ್ಯರಸ್ತೆಯ ತಗಚ್ಚಕುಪ್ಪೆ ಬಳಿಯ ಗೊಲ್ಲರಪಾಳ್ಯ ಬಲರಾಮು ಎಂಬುವವರ ಕಲ್ಲು ಬಾವಿಗೆ ಈಜಾಡಲು ಸ್ನೇಹಿತರು ಮುಂದಾಗಿದ್ದರು.
ಈಜೂ ಬಾರದ ಲಕ್ಷ್ಮಿಕಾಂತನನ್ನ ಬಾವಿಗೆ ತಳ್ಳಿದ ಸ್ನೇಹಿತರು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಮೇಲೆ ಬಾರದನ್ನು ಕಂಡ ಈ 7 ಮಂದಿ ಯುವಕರು ಬಾವಿಯಿಂದ ಮೇಲೆ ಎತ್ತಲು ಪ್ರಯತ್ನಿಸಿದರು ಆದ್ರೆ ಬಾವಿಯ ನೀರಿನ ಪಾಚಿಗೆ ಸಿಲುಕಿ ಲಕ್ಷ್ಮಿಕಾಂತ ಮೃತಪಟ್ಟಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿಯನ್ನ ತಾವರೆಕೆರೆ ಪೊಲೀಸರು ವಶಕ್ಕೆ ವಿಚಾರಣೆ ನಡೆಸುತ್ತಿದ್ದಾರೆ.
