ರಾಮನಗರ: ಸಧ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಎಲ್ಲ ವಿಚಾರಗಳನ್ನು ಜನರಿಗೆ ತಿಳಿಸಿಕೊಡುವೆ ಕೆಲಸ ಮಾಡುವೆ ಎಂದು ಸೋತರು ಮಂತ್ರಿಸ್ಥಾನ ಪಡೆದುಕೊಂಡಿರುವ ರಾಮನಗರದ ಸಚಿವ ಯೋಗೇಶ್ವರ ಅವರು ಹೇಳಿದ್ದಾರೆ.
ಹೌದು, ಶನಿವಾರ ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪರೋಕ್ಷವಾಗಿ ತಮ್ಮ ಖಾಯಂ ಎದುರಾಳಿಯಂತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಟಕ್ಕರ ನೀಡುವ ಮುಂಚೂಚನೆ ನೀಡಿದ್ದಾರೆ.
ಇನ್ನು ಇದೇ ವೇಳೆ ಕೋಲಾರ ಜಿಲ್ಲಾ ಉಸ್ತುವಾರಿ ಬಗ್ಗೆ ನನಗೆ ಗೊತ್ತಿಲ್ಲಾ, ಇದು ನನ್ನ ಜಿಲ್ಲೆಗೆ ಎರಡನೇ ಭೇಟಿ. ಮುಖ್ಯಮಂತ್ರಿಗಳು ನೀಡಿರುವ ಖಾತೆಯೂ ತೃಪ್ತಿ ತಂದಿದೆ. ಯಾವುದೇ ಖಾತೆಯಾದರು ಇಶ್ಚಾಶಕ್ತಿಯಿಂದ ಕೆಲಸ ಮಾಡಬೇಕು. ಅದನ್ನು ನಾನು ಮಾಡುವೆ ಎನ್ನುವ ಮೂಲಕ ಬದಲಾವಣೆ ಆಗೋದಿಲ್ಲಾ ಅಂತಾ ಸ್ಪಷ್ಟ ಪಡಿಸಿದ್ದಾರೆ.