ನಂದ ಕಿಶೋರ್ ನಿರ್ದೇಶನದ ರಾಣ ಚಿತ್ರದ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದ್ದು, ಸ್ಟಿಲ್ ಫೋಟೋಗ್ರಾಫರ್ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶ್ರೇಯಸ್ ಮಂಜು ಅಭಿನಯದ ನಂದಕಿಶೋರ್ ನಿರ್ದೇಶನದ ‘ರಾಣ’ ಚಿತ್ರದ ಚಿತ್ರೀಕರಣ ಮಂಗಳವಾರ ಬೆಂಗಳೂರಿನ ಮಿನರ್ವ ಮಿಲ್ ನಲ್ಲಿ ನಡೆಯತ್ತಿದ್ದಾಗ ಈ ಅವಘಢ ಸಂಭವಿಸಿದೆ.
ಶೂಟಿಂಗ್ ವೇಳೆ ಕಬ್ಬಿಣದ ಕಂಬ ಬಿದ್ದಿದ್ದರಿಂದ ತಲೆ ಮೇಲೆ ಬಿದ್ದಿದ್ದರಿಂದ ಸ್ಟಿಲ್ ಫೋಟೋಗ್ರಫರ್ ಪಳನಿ ಅವರಿಗೆ ಗಂಭೀರ ಗಾಯವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಪಳನಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.