ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾನು ಮೂರು ಟಿ ಎಂಸಿ ನೀರು ತೆಗೆದುಕೊಂಡಿದ್ದೆ. ಮೂರು ಟಿ ಎಂ ಸಿ ನೀರಿನ ಯೋಜನೆ ಈಗಾಗಲೇ ಆರಂಭವಾಗಬೇಕಿತ್ತು. ಆದ್ರೆ ಸಮ್ಮಿಶ್ರ ಸರ್ಕಾರ ಬಿದ್ದು ಹೋಯ್ತು. ಬಳಿಕ ಬಿಜೆಪಿ ಸರ್ಕಾರ ಬಂತು. ಯೋಜನೆಗೆ ಸಚಿವ ಮಾಧುಸ್ವಾಮಿ ಅಡ್ಡಗಾಲು ಹಾಕಿದ್ರು. ನನಗೆ ಮಾಧುಸ್ವಾಮಿ ಭೂತದ ತರಹ ಕಂಡ್ರು ಎಂದು ವಿಧಾನಸಭೆಯಲ್ಲಿ ಸಚಿವ ಮಾಧುಸ್ವಾಮಿ ವಿರುದ್ಧ ಶಾಸಕ ರಂಗನಾಥ್ ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಜೇಮ್ಸ್ ಚಿತ್ರಕ್ಕೂ ತೆರಿಗೆ ವಿನಾಯ್ತಿ ಕೊಡಿ ಎಂದು ಸರ್ಕಾರಕ್ಕೆ ಕಾಂಗ್ರೆಸ್ ಶಾಸಕ ಕುಣಿಗಲ್ ರಂಗನಾಥ್ ಆಗ್ರಹಿಸಿದ್ದಾರೆ. ಕಾಶ್ಮೀರ ಫೈಲ್ಸ್ ಗೆ ತೆರಿಗೆ ವಿನಾಯ್ತಿ ಕೊಟ್ಟ ಸರ್ಕಾರ ಜೇಮ್ಸ್ ಸಿನಿಮಾಕ್ಕೆ ಯಾಕೆ ತೆರಿಗೆ ವಿನಾಯ್ತಿ ಕೊಡ್ತಿಲ್ಲ? ಜೇಮ್ಸ್ ಗೆ ತೆರಿಗೆ ವಿನಾಯ್ತಿ ಕೊಡಲು ಸರ್ಕಾರ ಯಾಕೆ ಹಿಂಜರೀತಿದೆ. ಅದಕ್ಕೂ ತೆರಿಗೆ ವಿನಾಯ್ತಿ ಕೊಡಿ. ಅದರ ಕ್ರೆಡಿಟ್ ಸಹ ನಿಮಗೇ ಸಿಗಲಿ ಎಂದು ಹೇಳಿದ್ರು.
0 97 Less than a minute