ಸಿನಿ ದುನಿಯಾದಲ್ಲಿ ರಶ್ಮಿಕಾ ಲೆವೆಲ್ ಚೇಂಜ್ ಆಗೋಗಿದೆ. ಮೊನ್ನೆ ಮೊನ್ನೆಯಷ್ಟೇ ಕನ್ನಡದಲ್ಲಿ ಸಾನ್ವಿಯಾಗಿದ್ದ ಈ ಸುಂದ್ರಿ ಈಗ ನ್ಯಾಷಿನಲ್ ಕ್ರಷ್. ಸಿನಿ ಮಂದಿಯ ಫೇವರೆಟ್ ಹೀರೋಯಿನ್. ಸೂಪರ್ ಸ್ಟಾರ್ ನಟರ ಲಕ್ಕಿ ಗರ್ಲ್. ಹಾಗಾಗಿನೆ ಬಾಲಿವುಡ್ ಮಂದಿ ಕೂಡ ರಶ್ಮಿಕಾ ಹಿಂದೆ ಬಿದ್ದಿದ್ದಾರೆ. ಸದ್ಯ ಬಿಟೌನ್‍ನಲ್ಲಿ ಸೌಂಡ್ ಮಾಡ್ತಿರೋ ರಶ್ಮಿಕಾನೆ ತಮ್ಮ ನೆಕ್ಸ್ಟ್ ಸಿನಿಮಾಗೆ ಬೇಕು ಅಂತಾ ಟಾಲಿವುಡ್ ಮಗಧೀರ ಹಠ ಹಿಡಿದಿದ್ದಾರಂತೆ.

ಸದ್ಯ ಆರ್‍ಆರ್‍ಆರ್ ಚಿತ್ರದಲ್ಲಿ ಬ್ಯುಸಿ ಇರೋ ರಾಮ್ ಚರಣ್ ತೇಜಾ, ನೆಕ್ಸ್ಟ್ ವೆಂಚರ್‍ನಲ್ಲಿ, ಸೌತ್ ಸ್ಟಾರ್ ಡೈರೆಕ್ಟರ್ ಶಂಕರ್ ಜೊತೆ ಕೈ ಜೋಡಿಸಿದ್ದಾರೆ.. ಈಗಾಗ್ಲೇ ಪ್ರೀ ಪೊಡಕ್ಷನ್ ಕೂಡ ಕಂಪ್ಲೀಟ್ ಆಗಿದೆ. ಆದ್ರೆ ನಾಯಕಿ ಯಾರನ್ನ ಸೆಲೆಕ್ಟ್ ಮಾಡ್ಬೇಕು ಅನ್ನೋ ಪ್ರಶ್ನೆ ಬಂದಾಗ, ರಶ್ಮಿಕಾನೆ ಬೇಕು ಅಂದಿದ್ದಾರಂತೆ ಮಗಧೀರ. ಈ ಕ್ಯಾರೆಕ್ಟರ್‍ಗೆ ಆಕೆನೆ ಸುಟ್ ಆಗ್ತಾರೆ ಅಂತಾ ಸಲಹೆ ಕೂಡ ಕೊಟ್ಟಿದ್ದಾರಂತೆ

ಈಗಾಗ್ಲೇ ರಶ್ಮಿಕಾ ಜೊತೆ ಕೂಡ ಒಂದು ಸುತ್ತು ಮಾತುಕಥೆ ಆಗೋಗಿದೆಯಂತೆ. ಕಥೆ ಕೇಳಿ ಸಾನ್ವಿ ಫುಲ್ ಥ್ರಿಲ್ ಆಗಿದ್ದಾರಂತೆ. ಆದ್ರೆ ಸಿನಿಮಾದಲ್ಲಿ ನಟಿಸೋ ಬಗ್ಗೆ ಏನು ಹೇಳದೆ ಇದ್ರೂ ಸಹ, ಆಕೆಯ ರೆಸ್ಪಾನ್ಸೇ ರಾಮ್ ಜೊತೆ ಸಿನಿಮಾ ಮಾಡ್ತಾರೆ ಅನ್ನೋ ಸೂಚನೆ ಕೊಟ್ಟಂತಿದೆ.

ಒಂದು ಕಡೆ ಸೂಪರ್ ಸ್ಟಾರ್ ಇದ್ರೆ, ಮತ್ತೊಂದು ಕಡೆ ಸ್ಟಾರ್ ಡೈರೆಕ್ಟರ್ ಶಂಕರ್ ಇದ್ದಾರೆ. ಇಂತ ದಿಗ್ಗಜರ ಜೊತೆ ಕೆಲಸ ಮಾಡೋ ಅದೃಷ್ಟ ರಶ್ಮಿಕಾಗೆ ಬಂದಿರೋದನ್ನ ಕಂಡು, ಬೇರೆ ನಟಿಯರು ಹೊಟ್ಟೆ ಉರ್ಕೊಳ್ತಿದ್ದಾರಂತೆ.