ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಎಲ್ಲಾ ಕೊಟ್ಟರೂ ಅವರಿಗೆ ದ್ರೋಹ ಮಾಡಿ ಬಿಜೆಪಿಗೆ ಬಂದಿರಿ. ಈಗ ಯಡಿಯೂರಪ್ಪ ವಿರುದ್ಧ ಮಾತನಾಡಿದ ನೀವು ಉಂಡ ಮನೆಗೆ ದ್ರೋಹ ಮಾಡಿದ್ದೀರಿ. ಅದು ನಿಮ್ಮ ಗುಣ ಎಂದು ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್ ವೈ ನಾಯಕತ್ವದಲ್ಲಿ ನಮಗೆ ವಿಶ್ವಾಸ ಇದೆ. ಯಾರು ಬಿಎಸ್ ವೈ ವಿರುದ್ಧ ಮಾತಾಡಿದ್ದಾರೆ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ತಹ ಮಾಡುತ್ತೇವೆ. ಯಾರೋ ಒಂದಿರಬ್ಬರು ಬೆರಳೆಣಿಕೆಯಷ್ಟು ಬಿಟ್ರೆ, ಬೇರೆ ಯಾರು ಕೂಡ ಸಿಎಂ ವಿರುದ್ಧ ಮಾತಾಡ್ತಿಲ್ಲ ಎಂದರು.
ಅರುಣ್ ಸಿಂಗ್ ಭೇಟಿ ಬಳಿಕ ಮಾಧ್ಯಮದ ಮುಂದೆ ನಾಯಕತ್ವ ಬದಲಾವಣೆ ಕುರಿತು ವಿಶ್ವನಾಥ್ ಮಾತನಾಡಿರುವುದು ತಪ್ಪು. ವಿಶ್ವನಾಥ್ ಅವರೇ ನಿಮಗೆ ವಯಸ್ಸು ಎಷ್ಡು? ಯಡಿಯೂರಪ್ಪನವರಿಗೆ ವಯಸ್ಸಾದ್ರು ಅವರು ಹಗಲಿರು ಕೆಲಸ ಮಾಡ್ತಿದ್ದಾರೆ. ಹಿಂದೆ ಸಿದ್ದರಾಮಯ್ಯ, ಎಸ್.ಎಂ. ಕೃಷ್ಣ ವಿರುದ್ಧ ಏನೆಲ್ಲಾ ಮಾತಾಡಿದ್ರಿ. ಆಮೇಲೆ ಜೆಡಿಎಸ್ ನಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟ, ದೇವೇಗೌಡ, ಕುಮಾರಸ್ವಾಮಿಗೆ ಮೋಸ ಮಾಡಿದಿರಿ ಎಂದು ಅವರು ಕಿಡಿಕಾರಿದರು.
ನಮ್ಮ ಪಕ್ಷಕ್ಕೆ ನೀವು ಬಂದಾಗ ಕೋರ್ಟ್ ನಲ್ಲಿ ನಿಮ್ಮ ವಿರುದ್ಧ ಆದೇಶ ಇದ್ದರೂ ನಿಮಗೆ ಸಿಎಂ ಎಂಎಲ್ಸಿ ಮಾಡಿದರು. ಆದರೂ ಸಚಿವ ಸ್ಥಾನ ಸಿಗಲಿಲ್ಲ ಅಂತ ಈ ರೀತಿ ಯಡಿಯೂರಪ್ಪ ವಿರುದ್ಧ ಹೇಳಿಕೆ ಕೊಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ಸಿಎಂ ಆಗಲು ತಿರುಕನ ಕನಸ್ಸು ಕಾಣ್ತಿರೋದು ಯತ್ನಾಳ್ ಅವರು. ಹಿಂದೆ ಅವರು ನನಗೆ ಯತ್ನಾಳ್, ನೀನು ಸೈಲೆಂಟಾಗಿ ಇರು, ನಿನ್ನನ್ನು ಹೋಮ್ ಮಿನಿಸ್ಟರ್ ಮಾಡ್ತೀನಿ ಅಂತ ಆಮೀಷ ಒಡ್ಡಿದ್ದರು. ಈ ಮಾತನ್ನು ನಾನು ಹೇಳ್ತಿರೋದು ಸತ್ಯದ ಮಾತು ಎಂದರು.