ದಾವಣಗೆರೆಯ ನ್ಯಾಮತಿ ತಾಲೂಕಿನ ಆಡಳಿತ ಹಾಗೂ ಸಮಾಜದ ಬಂಧುಗಳಿಂದ ಬಸವ ಜಯಂತಿ ಆಚರಿಸಲಾಯಿತು. ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಬಸವಣ್ಣನವರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಬಸವಣ್ಣನ ಭಾವಚಿತ್ರ ಹೊತ್ತ ಟ್ಯಾಕ್ಟರ್ ಚಲಾಯಿಸುವ ಮೂಲಕ ರೇಣುಕಾಚಾರ್ಯ ಎಲ್ಲರ ಗಮನವನ್ನು ಸೆಳೆದರು. ಬಸವಜಯಂತಿ ಹಿನ್ನೆಲೆಯಲ್ಲಿ ಎತ್ತುಗಳಿಗೆ ವಿಶೇಷ ಅಲಂಕಾರವನ್ನು ಯುವಕರು ಮಾಡಿದ್ದರು. ಎತ್ತುಗಳಿಗೆ ನಮಸ್ಕರಿಸಿದ ರೆಣುಕಾಚಾರ್ಯ ಎತ್ತುಗಳೊಂದಿಗೆ ಸಖತ್ ಪೋಸ್ ನೀಡಿದರು.ಇದನ್ನು ಓದಿ:-ಬಿಜೆಪಿ ಸರ್ಕಾರ ವಿರುದ್ದ ಕಿಡಿಕಾರಿದ ಶರತ್ ಬಚ್ಚೇಗೌಡ