ವಿವಾದ ಸೃಷ್ಟಿಸಿದ ಟಾಪ್ಲೆಸ್ ಫೊಟೋ: ಪಾಪ್ ಗಾಯಕಿ ರಿಹಾನಾಳ ಎಡವಟ್ಟು
ಬಾರ್ಬಡೋಸ್: ಪಾಪ್ ಗಾಯಕಿ ರಿಹಾನಾ ಮತ್ತೊಂದು ಎಡವಟ್ಟು ಮಾಡಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಭಾರತದಲ್ಲಿ ಚರ್ಚೆಗೊಳಗಾಗಿದ್ದರು. ಇದೀಗ ಅವರ ಟಾಪ್ಲೆಸ್ ಫೋಟೋ ಒಂದು ಭಾರೀ ವಿವಾದ ಸೃಷ್ಟಿಸಿದೆ. ರಿಹಾನಾ ಟಾಪ್ಲೆಸ್ ಫೋಟೋದಲ್ಲಿ ಗಣೇಶನ ಪೆಂಡೆಂಟ್ ಧರಿಸಿ ಭಾರತೀಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಟಾಪ್ಲೆಸ್ ಫೊಟೋದಲ್ಲಿ ಗಣೇಶನ ಪೆಂಡೆಂಟ್ ಧರಿಸಿ ಹಿಂದೂಗಳ ಭಾವನೆಗಳಿಗೆ ರಿಹಾನಾ ಧಕ್ಕೆ ತಂದಿದ್ದಾರೆ ಎಂದು ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.
ತಮ್ಮ ಎದೆಭಾಗವನ್ನು ಕೈಯಲ್ಲಿ ಮುಚ್ಚಿಕೊಂಡಿರುವ ರಿಹಾನಾ, ಕೊರಳಿಗೆ ಗಣೇಶನ ಪೆಂಡೆಂಟ್ ಇರುವ ಸರವನ್ನು ಹಾಕಿಕೊಳ್ಳುವ ಮೂಲಕ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ. ಈ ಟ್ವೀಟ್ ಸ್ವಾಭಾವಿಕವಾಗಿ ಅಸಂಖ್ಯಾತ ಹಿಂದೂಗಳನ್ನು ಕೆರಳಿಸಿದೆ. ಇನ್ನು, ಹಿಂದೂ ಧರ್ಮೀಯರ ಭಾವನೆಗೆ ಈಕೆ ಧಕ್ಕೆ ತಂದಿದ್ದಾರೆಂದು ಮುಂಬೈ ಮತ್ತು ದೆಹಲಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಿಹಾನಾ ಅವರ ಈ ಟ್ವೀಟ್ ಗೆ ಹಲವರು ರಿಟ್ವೀಟ್ ಮಾಡಿ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ರಿಹಾನಾ ಈ ರೀತಿ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿರುವುದು ಇದೇ ಮೊದಲೇನಲ್ಲ. ಒಳಉಡುಪುಗಳ ಪ್ರತಿಷ್ಠಿತ ಬ್ರ್ಯಾಂಡ್‌ಗಳಿಗೆ ರಾಯಭಾರಿ ಆಗಿರುವ ಅವರು ಈ ಹಿಂದೆ ಅನೇಕ ಬಾರಿ ಇದೇ ರೀತಿ ಪೋಸ್ ನೀಡಿದ್ದರು. 2013ರಲ್ಲಿ ಅಬುಧಾಬಿಯಲ್ಲಿ ಕೆಲವು ಆಕ್ಷೇಪಾರ್ಹ ಫೊಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದರಿಂದ ರಿಹಾನಾರನ್ನು ಶೇಕ್ ಗ್ರಾಂಡ್ ಮಾಸ್ಕ್ ಸೆಂಟರ್ನಿಮದ ಹೊರಹೋಗುವಂತೆ ಸೂಚಿಸಲಾಗಿತ್ತು. ಫೆ. 12ರಂದು ರಿಹಾನಾ ನವದೆಹಲಿಯ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು.