ಪ್ರವಾಸಿಗರನ್ನು ಆಕರ್ಷಿಸಲು 10 ಪ್ರವಾಸಿ ತಾಣಗಳಲ್ಲಿ ರೋಪ್ ವೇ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಶುಕ್ರವಾರ ಪ್ರಕಟಿಸಿದ ಚೊಚ್ಚಲ ಬಜೆಟ್ ನಲ್ಲಿ ಬೊಮ್ಮಾಯಿ ಪ್ರವಾಸಿ ತಾಣಗಳ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದು, ಚಾಮುಂಡಿ ಬೆಟ್ಟ, ಜೋಗ್ ಜಲಪಾತ, ಮುಳ್ಳಯ್ಯನಗಿರಿ, ನಂದಿ ಬೆಟ್ಟ, ಯಾಣ ಸೇರಿದಂತೆ 10 ಪ್ರವಾಸಿ ತಾಣಗಳಲ್ಲಿ ರೋಪ್ ವೇ ನಿರ್ಮಿಸುವುದಾಗಿ ಘೋಷಿಸಿದರು.
ನಂದಿ ಬೆಟ್ಟದಲ್ಲಿ 93 ಕೋಟಿ ರೂ. ಯಾಣದಲ್ಲಿ 100 ಕೋಟಿ ರೂ. ಹಾಗೂ ಜೋಗ್ ಜಲಪಾತದಲ್ಲಿ 193 ಕೋಟಿ ರೂ. ವೆಚ್ಚದಲ್ಲಿ ರೋಪ್ ವೇ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.