ದಕ್ಷಿಣ ಆಫ್ರಿಕ ಮೂಲದ ವ್ಯಕ್ತಿಯೊಬ್ಬ ಹೊಟ್ಟೆಯಲ್ಲಿ 11 ಕೋಟಿ ಮೌಲ್ಯದ ಮಾದಕದ್ರವ್ಯವನ್ನು ಬೆಂಗಳೂರಿಗೆ ತರುತ್ತಿದ್ದಾಗ ಗುಪ್ತಚರ ಇಲಾಖೆ ಕೈಗೆ ಸಿಕ್ಕಿಬಿದ್ದಿದ್ದಾನೆ.
ಗುಪ್ತಚರ ಇಲಾಖೆ ಅಧಿಕಾರಿಗಳ ಸಮಯಪ್ರಜ್ಞೆಯಿಂದ ದಕ್ಷಿಣ ಆಫ್ರಿಕಾ ಮೂಲದ ವ್ಯಕ್ತಿಯ ಹೊಟ್ಟೆಯಲ್ಲಿದ್ದ 1.25 ಕೆ.ಜಿ.ತೂಕದ ಕೊಕೇನ್ ಕ್ಯಾಪ್ಸುಲ್ಸ್ ಪತ್ತೆಯಾಗಿವೆ.
ಆಗಸ್ಟ್ 19ರಂದು ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ವಿದೇಶೀ ವ್ಯಕ್ತಿ ಗುಪ್ತಚರ ಇಲಾಖೆಯ ಡಿಆರ್ ಐ ಅಧಿಕಾರಿಗಳ ಸಮಯಪ್ರಜ್ಞೆಯಿಂದ ಸಿಕ್ಕಿಬಿದ್ದಿದ್ದಾನೆ. ವಿಮಾನದಲ್ಲಿ ಏರ್ ಟಿಕೆಟ್ ಪ್ಯಾಕೇಜ್ ಪ್ರಯುಕ್ತ ಉಚಿತ ಆಹಾರ, ನೀರು, ಪಾನೀಯ ನೀಡಿದ್ದರೂ ನಿರಾಕರಿಸಿದ್ದ.
ಗುಪ್ತಚರ ಇಲಾಖೆಯ ಅಧಿಕಾರಿಗಳು ಅನುಮಾನಾಸ್ಪದ ನಡೆಯಿಂದ ಅನುಮಾನಗೊಂಡು ತಪಾಸಣೆ ನಡೆಸಿದರೂ ಡ್ರಗ್ಸ್ ಪತ್ತೆಯಾಗಿರಲಿಲ್ಲ. ನಂತರ ಸ್ಕ್ಯಾನಿಂಗ್ ಮಾಡಿಸಿದಾಗ ಖದೀಮನ ಚಲಾಕಿತನ ಪತ್ತೆಯಾಗಿದ್ದು, ನಗರದ ವಿಕ್ಟೋರಿಯಾ ಆಸ್ಪತ್ರೆಗೆ ವ್ಯಕ್ತಿಯನ್ನು ಕರೆದೊಯ್ದು ಹೊಟ್ಟೆಯಲ್ಲಿದ್ದ ಕೊಕೇನ್ ಕ್ಯಾಫ್ಸೂಲ್ಸ್ ಹೊರೆತೆಗೆಸಿದ್ದಾರೆ.