ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಆದಾಯ ನೀಡುವುದಾಗಿ ಮೊಬೈಲ್ ಆ್ಯಪ್ ಮೂಲಕ ಸಾರ್ವಜನಿಕರಿಂದ ಹಣ ಹೂಡಿಕೆ ಹೆಸರಿನಲ್ಲಿ 290 ಕೋಟಿ ರೂ. ಮೌಲ್ಯದ ಹವಾಲಾ ಪ್ರಕರಣವನ್ನು ಸಿಐಡಿ ಭೇದಿಸಿದೆ.
ಕೇರಳ ಮೂಲದ ಕಿಂಗ್‌ಪಿನ್ ಅನಸ್ ಅಹ್ಮದ್ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಪವರ್ ಬ್ಯಾಂಕ್ ಹೊಡಿಕೆ ಹೆಸರಿನಲ್ಲಿ ನಡೆಯುತ್ತಿದ್ದ ಹವಾಲ ಪ್ರಕರಣವನ್ನು ಭೇದಿಸಲಾಗಿದ್ದು, ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹಣ ಹೊಡಿಕೆ ಮಾಡಿಕೊಳ್ಳುವಂತಹ ಮೊಬೈಲ್ ಅಪ್ಲಿಕೇಷನ್ ತಯಾರಿಸುತ್ತಿದ್ದರು. ಆರಂಭಿಕವಾಗಿ ಹೊಡಿಕೆದಾರರಿಗೆ ಸಣ್ಣ ಪ್ರಮಾಣದಲ್ಲಿ ಬಡ್ಡಿ ಪಾವತಿ ಮಾಡಲಾಗುತ್ತಿತ್ತು. ಹೆಚ್ಚು ಹೊಡಿಕೆ ಆದ ನಂತರ ಬಡ್ಡಿ ನೀಡದೆ ಹೂಡಿಕೆ ಹಣವನ್ನು ಶೇಲ್/ ಬೇನಾಮಿ ಕಂಪನಿಗಳನ್ನ ತೆರೆಯುತ್ತಿದ್ದರು.
ಕೊರೊನಾ ಸಂಕಷ್ಟದಲ್ಲಿ ಮನೆಯಲ್ಲೇ ಆದಾಯ ಮಾಡುವ ಆಮೀಷ ಒಡ್ಡಲಾಗುತ್ತಿದ್ದು, ಸಾರ್ವಜನಿಕರಿಂದ ಹೆಚ್ಚು ಹಣ ಸಂಗ್ರಹಿಸುತ್ತಿದ್ದಂತೆ ಮೊಬೈಲ್ ಆ್ಯಪ್ ಅನ್ನು ಅನ್ ಇನ್ ಸ್ಟಾಲ್ ಮಾಡುತ್ತಿದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ ಸುಮಾರು 290 ಕೋಟಿ ರೂ. ಬಂದಿತ್ತು ಎನ್ನಲಾಗಿದೆ.
ಚೀನಾ ಮೂಲದ ವ್ಯಕ್ತಿ ಮತ್ತು ಟಿಬೆಟ್ ಪ್ರಜೆಗಳ ಹೆಸರಿನಲ್ಲಿ ಬ್ಯಾಂಕ್ ಖಾತೆ ಮತ್ತು ಕಂಪನಿ ತೆರೆಯುತ್ತಿದ್ದ ಅನಸ್ ಅಹ್ಮದ್ ಚೀನಾದ ಹವಾಲಾ ಏಜೆಂಟ್ ರೊಂದಿಗೆ ಸಂಪರ್ಕ ಸಾಧಿಸಿ ಹಣ ವರ್ಗಾವಣೆ ಮಾಡುತ್ತಿದ್ದ.
ಅಕ್ರಮ ಹಣ ವರ್ಗವಣೆ ಸಲುವಾಗಿ ಬುಲ್ ಫಿಂಚ್ ಟೆಕ್ನಾಲಜೀಸ್, ಹೆಚ್ ಆ್ಯಂಡ್ ಎಸ್ ವೈಚರ್ಸ್, ಕ್ಲಿಪೋಡ್ ವೆಂಚರ್ಸ್ ಮುಂತಾದ ಕಂಪನಿ ತೆರೆದು ಸಾರ್ವಜನಿಕರನ್ನು ವಂಚಿಸಿದ್ದ.