ಕಡಿಮೆ ಬೆಲೆಗೆ ಸೈಟ್ ಕೊಡಿಸುವುದಾಗಿ ಸಾರ್ವಜನಿಕರಿಗೆ ಬೆಂಗಳೂರಿನ ಬೃಂದಾವನ್ ಪ್ರಾಪಟ್ರಿಸ್ ಕಂಪನಿ ಸುಮಾರು 500 ಕೋಟಿ ರೂ. ವಂಚಿಸಿದ್ದು, ಸಾರ್ವಜನರು ಕಚೇರಿ ಮುಂಭಾಗ ಹಣ ಹಿಂತಿರುಗಿಸುವಂತೆ ಪ್ರತಿಭಟನೆ ನಡೆಸಿದ್ದಾರೆ.
ರಾಜಾಜಿನಗರದ ಮೂರನೇ ಹಂತದ ಬೃಂದಾವನ ಪ್ರಾಪರ್ಟಿಸ್ 5ರಿಂದ 6 ಲಕ್ಷ ರೂ.ಗಳಿಗೆ ನಗರದ ಹೊರವಲಯದಲ್ಲಿ ಸೈಟ್ ಕೊಡಿಸುವುದಾಗಿ ತಾವರೆಕರೆ, ಹೆಸರಘಟ್ಟ, ನೆಲಮಂಗಲ ಕಡೆ ನಿವೇಶನ ತೋರಿಸಿ ನೂರಾರು ಜನರಿಗೆ ವಂಚನೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.
ದಿನೇಶ್ ಗೌಡ ಒಡೆತನದ ಬೃಂದಾವನ್ ಪ್ರಾಪರ್ಟಿಸ್ ಕಂಪನಿ ಕಳೆದ ಐದು ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿತ್ತು. ಇದೀಗ ಕಂಪನಿಯನ್ನು ಮುಚ್ಚಿ ಮಾಲೀಕರು ಪರಾರಿಯಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಹಣ ಹೂಡಿಕೆ ಮಾಡಿದ ಸಾರ್ವಜನಿಕರು ಬೃಂದಾವನ ಪ್ರಾಟರ್ಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದು, ಹಣ ವಾಪಸ್ ಕೊಡಿಸುವಂತೆ ಆಗ್ರಹಿಸಿದ್ದಾರೆ. ಕಂಪನಿಯಲ್ಲಿ ಕ್ಯಾಬ್ ಚಾಲಕರು, ಪ್ಲಂಬರ್, ಹೋಟೆಲ್ ಸಪ್ಲೈಯರ್ ಗಳು ಹಣ ಹೂಡಿಕೆ ಮಾಡಿದ್ದಾರೆ.
ಸ್ಥಳಕ್ಕೆ ರಾಜಾಜಿನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ವಂಚನೆ ಬಗ್ಗೆ ದೂರು ನೀಡುವಂತೆ ಪೊಲೀಸರಿಂದ ಸೂಚಿಸಿದ್ದಾರೆ.