ರಷ್ಯಾ ಮತ್ತು ಉಕ್ರೇನ್ ನಿಯೋಗ ಬೈಲೋರಷ್ಯಾದ ಗಡಿಯಲ್ಲಿ ಮಾತುಕತೆ ಆರಂಭಿಸುವ ಮೂಲಕ ಎರಡು ದೇಶಗಳ ನಡುವಣ ಯುದ್ಧ ಅಂತ್ಯಗೊಳ್ಳುವ ಪ್ರಕ್ರಿಯೆಯ ಮೊದಲ ಹಂತ ಆರಂಭವಾಗಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿ 5 ದಿನಗಳು ಕಳೆದಿದ್ದು, ಮಾತುಕತೆ ಆರಂಭದ ಬೆನ್ನಲ್ಲೇ ಕದನ ವಿರಾಮ ಘೋಷಿಸುವಂತೆ ಉಕ್ರೇನ್ ಆಗ್ರಹಿಸಿದೆ.
ರಷ್ಯಾ ದಾಳಿ ಹಿನ್ನೆಲೆಯಲ್ಲಿ ಈಗಾಗಲೇ ಉಕ್ರೇನ್ ದೇಶ ತೊರೆದು 5 ಲಕ್ಷಕ್ಕೂ ಅಧಿಕ ಜನರು ವಲಸೆ ಹೋಗಿದ್ದರೆ, ಸಾವಿರಾರು ಯೋಧರು ಹುತಾತ್ಮರಾಗಿದ್ದಾರೆ. 350ಕ್ಕೂ ಹೆಚ್ಚು ಉಕ್ರೇನ್ ನಾಗರಿಕರು ಮೃತಪಟ್ಟಿದ್ದಾರೆ.