ಹಿರಿಯ ನಟಿ ಸಾಯಿರಾ ಭಾನು ಚೇತರಿಸಿಕೊಂಡಿದ್ದು, ಮುಂಬೈನ ಖಾಸಗಿ ಆಸ್ಪತ್ರೆಯಿಂದ ಭಾನುವಾರ ರಾತ್ರಿ ಡಿಸ್ಚಾರ್ಜ್ ಆಗಿದ್ದಾರೆ.
ಇತ್ತೀಚೆಗೆ ದಿವಂಗತರಾದ ದಿಲೀಪ್ ಕುಮಾರ್ ಅವರ ಪತ್ನಿ ಹಾಗೂ ಪಡೋಸನ್ ಖ್ಯಾತಿಯ ನಟಿ ಸಾಯಿರಾ ಭಾನು ರಕ್ತದೊತ್ತಡ, ಸಕ್ಕರೆ ಮತ್ತು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ಕೆಲವು ದಿನಗಳ ಚಿಕಿತ್ಸೆ ನಂತರ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
ಸಾಯಿರಾ ಭಾನು ಸಂಪೂರ್ಣವಾಗಿ ಚೇತರಿಸಿಕೊಂಡು ಮನೆಗೆ ಮರಳಿದ್ದು, ಅವರಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಕುಟುಂಬದ ಆಪ್ತರಾದ ಫೈಸಲ್ ಫಾರೂಖಿ ತಿಳಿಸಿದ್ದಾರೆ.