ಫುಡ್ ಕಿಟ್ ಹಂಚಿ ಬರುವಾಗ ನಡೆದ ಅಪಘಾತದಲ್ಲಿ ಸಂಚಾರಿ ವಿಜಯ್ ಗಾಯಗೊಂಡಿದ್ದಾರೆ. ಅವರು ಮಾಡಿದ ಕೆಲಸ ವಿಜಯ್ ಅವರನ್ನು ಕಾಪಾಡುತ್ತೆ ಎಂದು ನಟ ಸತೀಶ್ ನೀನಾಸಂ ಹೇಳಿದ್ದಾರೆ.
ರಸ್ತೆ ಅಪಘಾತಲ್ಲಿ ನಟ ಸಂಚಾರಿ ವಿಜಯ್ ಗಾಯಗೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ ಸತೀಶ್ ನೀನಾಸಂ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಪಘಾತ ಹೇಗಾಯಿತು ಎಂಬುದು ತಿಳಿದಿಲ್ಲ. ಆದರೆ ಫುಡ್ ಕಿಟ್ ಹಂಚಿ ಬರುವಾಗ ಈ ಘಟನೆ ಆಗಿದೆ. 24 ಗಂಟೆಯಲ್ಲಿ ಪ್ರಜ್ಞೆ ಬರುತ್ತೆ ಎಂದು ವೈದ್ಯರು ಹೇಳಿದ್ದಾರೆ ಎಂದು ಅವರು ಹೇಳಿದರು.
ಸಂಚಾರಿ ವಿಜಯ್ ಜೀವಕ್ಕೆ ಯಾವುದೇ ಅಪಾಯ ಇಲ್ಲ. ಚಿಕಿತ್ಸೆ ಎಲ್ಲಾ ನೀಡಿದ್ದಾರೆ. 48 ಗಂಟೆ ವೈದ್ಯರ ನಿಗಾದಲ್ಲಿ ಇರಲಿದ್ದಾರೆ. ಅವರ ಸೇವಾ ಮನೋಭಾವ ಅವರನ್ನು ಕಾಪಾಡುತ್ತೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.