ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗುಲ್ರಾನಿ ನಿಷೇದಿತ ಮಾದಕ ದ್ರವ್ಯ ಖರೀದಿಸಲು ಡೆಬಿಟ್ ಕಾರ್ಡ್ ಬಳಸುತ್ತಿದ್ದರು ಎಂಬುದು ಸಿಸಿಬಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಹೈದರಾಬಾದ್ ನ ಎಫ್ ಎಸ್ ಎಲ್ ವರದಿಯಲ್ಲಿ ಡ್ರಗ್ಸ್ ಸೇವನೆ ಸಾಬೀತಾದ ಬೆನ್ನಲ್ಲೇ ಡ್ರಗ್ಸ್ ಪ್ರಕರಣದ ಒಂದೊಂದೇ ವಿವರಗಳು ಹೊರಗೆ ಬರುತ್ತಿದ್ದು, ನಟಿಯರು ಕೊಕೇನ್, ಎಲ್ ಎಸ್ ಡಿ, ಎಂಡಿಎಂಎ ಸಿಂಥಟಿಕ್ ಡ್ರಗ್ ಸೇವಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಕೊಕೇನ್ ಸೇವಿಸಲು ಡೆಬಿಟ್ ಕಾರ್ಡ್ ಗಳನ್ನು ರಾಗಿಣಿ ಮತ್ತು ಸಂಜನಾ ಇಬ್ಬರೂ ಬಳಸುತ್ತಿದ್ದರು. ಇವರು ಪಂಚತಾರ ಹೋಟೇಲ್, ಪಬ್ ಹಾಗೂ ಪ್ರೈವೇಟ್ ಅಪಾರ್ಟ್ ಮೆಂಟ್ ಗಳಲ್ಲಿ ನಡೆಯುತ್ತಿದ್ದ ಪಾರ್ಟಿಗಳಲ್ಲಿ ಡ್ರಗ್ ಸೇವಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ನಟಿಯರ 285ಕ್ಕೂ ಹೆಚ್ಚು ವಾಟ್ಸಪ್ ಚಾಟ್ ರಿಟ್ರೀವ್ ಮಾಡಿರುವ ಸಿಸಿಬಿ ಪೊಲೀಸರು ಡ್ರಗ್ಸ್ ಸೇವನೆಯ ಕುರಿತು ಮಾತುಕತೆ ನಡೆಸಿರುವುದನ್ನು ಪತ್ತೆ ಹಚ್ಚಿದ್ದಾರೆ. ಸಂಜನಾ ತನ್ನ ಸ್ನೇಹಿತರಾದ ವಿರೇನ್ ಖನ್ನ, ರಾಹುಲ್ ತೊನ್ಸೆ, ನಿಯಾಜ್ ಜೊತೆ ವಾಟ್ಸಪ್ ನಲ್ಲಿ ಚಾಟಿಂಗ್ ಮಾಡಿರುವುದು ಪತ್ತೆಯಾಗಿದೆ.
ಕಿರುತರೆ ನಿರೂಪಕ ಸೇರಿದಂತೆ ತಾರಾ ದಂಪತಿಗೆ ಪಾರ್ಟಿಗಳಲ್ಲಿ ಡ್ರಗ್ಸ್ ಪಡೆಯುವಂತೆ ಆಫರ್ ನೀಡಿರುವುದು ತಿಳಿದು ಬಂದಿದೆ. ಅವರನ್ನು ಓಲೈಸಲು ಸುಮಾರು 49 ಬಾರಿ ಕರೆ ಮಾಡಿರುವುದು ತಿಳಿದು ಬಂದಿದೆ.