ಅಭಿಮಾನಿಗಳ ಪ್ರಶ್ನೆಗೆ ಬಿಕ್ಕಿ ಬಿಕ್ಕಿ ಅತ್ತ ನಟಿ ರಾಗಿಣಿ ದ್ವಿವೇದಿ

ಡ್ರಗ್ಸ್ ಕೇಸ್ ನಲ್ಲಿ ಸುಮಾರು 144 ದಿನ ಜೈಲಿನಲ್ಲಿದ್ದ ನಟಿ ರಾಗಿಣಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಹೊರಗೆ ಬಂದಾದ ಮೇಲೆ ಎಲ್ಲರಿಂದ ಅಂತರ ಕಾಯ್ದುಕೊಂಡಿದ್ದ ನಟಿ ಸಮಾಜಿಕ ಜಾಲತಾಣದಲ್ಲಿ ಆಗಾಗ ಪೋಸ್ಟ್ ಹಾಕುವ ಮೂಲಕ ಸಕ್ರಿಯ ಆಗಿದ್ದರು. ಆದರೆ, ಅಭಿಮಾನಿಗಳ ಮನಸ್ಸಿನಲ್ಲಿ ರಾಗಿಣಿ ಅವರ ಜೈಲುವಾಸದ ಬಗ್ಗೆ ಸಾಕಷ್ಟು ಪ್ರಶ್ನೆಗಳಿದ್ದವು. ಅದನ್ನು ಕೇಳಲು ಸಾಧ್ಯವಾಗುತ್ತಿರಲಿಲ್ಲ.
ಆದರೆ ಇಂದು ನಟಿ ತಮ್ಮ ಇನ್ಸ್ಸ್ಟಾಗ್ರಾಂ ನಲ್ಲಿ ಲೈವ್ ಬಂದಿದ್ದರು. ಈ ವೇಳೆ ಅಭಿಮಾನಿಗಳು ತಮ್ಮ ಮನಸ್ಸಿನಲ್ಲಿದ್ದ ಪ್ರಶ್ನೆಗಳನ್ನು ಕೇಳಿದ್ದಾರೆ. ಜೈಲಿನಲ್ಲಿದ್ದ ಆ ದಿನಗಳ ಬಗ್ಗೆ ಅಭಿಮಾನಿಗಳು ಕೇಳಿದ್ದೆ ತಡ ನಟಿ ರಾಗಿಣಿ ಕಣ್ಣೀರು ಹಾಕಿದ್ದಾರೆ. ಆ ಕರಾಳ ದಿನಗಳ ನೋವನ್ನು ಹಂಚಿಕೊಂಡಿದ್ದಾರೆ.
ನನ್ನ ಧೈರ್ಯ, ಪಾಸಿಟಿವಿಟಿ ಬಗ್ಗೆ ತುಂಬಾ ಜನ ಕೇಳ್ತಾರೆ, ಅದಕ್ಕೆ ಕಾರಣ ನನ್ನ ತಂದೆ ತಾಯಿ. ಪ್ರತಿಯೊಂದು ಹಂತದಲ್ಲಿಯೂ ನನ್ನ ಜತೆಗಿದ್ದರು. ತಪ್ಪು ಮಾಡಿಲ್ಲ ಅಂದರೆ ಭಯ ಯಾಕೆ ಅಂತ ಧೈರ್ಯ ತುಂಬಿದರು. ಈಗಲೂ ರಾತ್ರಿಯಲ್ಲಿ ನನಗೆ ಸರಿಯಾಗಿ ನಿದ್ದೆ ಬರಲ್ಲ. ನಾನಿನ್ನೂ ಚೇತರಿಸಿಕೊಳ್ಳುತ್ತಿದ್ದೇನೆ. ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ ಎಂದು ಭಾವುಕರಾದ ನಟಿ ರಾಗಿಣಿ ಕಣ್ಣೀರಿಟ್ಟಿದ್ದಾರೆ.
ನನಗೆ ಒಳ್ಳೆಯ ಕಮೆಂಟ್ಗಳ ಜೊತೆಗೆ ಕೆಟ್ಟ ಕಮೆಂಟ್ಗಳ ಸಹ ಬರುತ್ತಿವೆ. ಸಿನಿಮಾ ಹಾಗೂ ಡ್ರಗ್ಸ್ ಬಗ್ಗೆ ನೆಟ್ಟಿಗರು ಪ್ರಶ್ನೆ ಕೇಳುತ್ತಿದ್ದಾರೆ ಎಂದ ನಟಿ, ಹೆಣ್ಣು ಮಕ್ಕಳಿಗೆ ಕೆಟ್ಟದಾಗಿ ಹೆಸರಿಟ್ಟು ಕರೆದರೆ, ತುಂಬಾ ಖುಷಿ ಸಿಗುತ್ತದೆ ಎನಿಸುತ್ತದೆ. ನನ್ನಿಂದ ನೀವು ಖುಷಿ ಪಟ್ಟಿದ್ದರೆ ನಿಜ್ಜಕ್ಕೂ ನನಗೆ ಸಂತೋಷ. ನನ್ನಿಂದ ನಿಮಗೆ ಸಂತೋಷವಾಯಿತಲ್ಲ ಎಂದು ಸಂತಸ ಪಡುತ್ತೇನೆ ಎಂದಿದ್ದಾರೆ.
ಡ್ರಗ್ಸ್ ಜಾಲ ಪ್ರಕರಣದ ಸಂಬಂಧ ಸಿಸಿಬಿ ಪೊಲೀಸರು 2020ರ ಸೆ.4 ರಂದು ನಟಿ ರಾಗಿಣಿ ಮತ್ತು ಸೆ.8 ರಂದು ನಟಿ ಸಂಜನಾರನ್ನು ಬಂಧಿಸಿದ್ದರು. ಪೊಲೀಸ್ ಕಸ್ಟಡಿ ಮುಗಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯ, ಸೆ.28 ರಂದು ಜಾಮೀನು ಅರ್ಜಿ ವಜಾಗೊಳಿಸಿತ್ತು. ಇದರಿಂದ, ರಾಗಿಣಿ ಮತ್ತು ಸಂಜನಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅರ್ಜಿದಾರರ ವಿರುದ್ಧ ಡ್ರಗ್ಸ್ ಪೂರೈಕೆ, ಮಾರಾಟ ಹಾಗೂ ಸೇವನೆಯಂಥಹ ಗಂಭೀರ ಆರೋಪಗಳಿದ್ದು, ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು.