ಡಾ.ರಾಜ್ ಕುಮಾರ್ ಸೇರಿದಂತೆ ಸ್ಟಾರ್ ನಟರ ಜೊತೆ ನಟಿಸಿದ್ದ ಹಿರಿಯ ನಟಿ ಸುರೇಖಾ ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.
ಸುಮಾರು 150 ಚಿತ್ರಗಳಲ್ಲಿ ನಟಿಸಿದ್ದ ಸುರೇಖಾ, ಅವರು, ಅವನಲ್ಲೈ, ಮಾಯಾ ಮನುಷ್ಯ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಡಾ.ರಾಜ್ ಅಭಿನಯದ ತ್ರಿಮೂರ್ತಿ, ಒಲವು ಗೆಲುವು, ಕಸ್ತೂರಿ ನಿವಾಸ ಚಿತ್ರಗಳಲ್ಲಿ ನಟಿಸಿದ್ದರು. ಅಲ್ಲದೇ ಭಕ್ತ ಸಿರಿಯಾಳ, ಕೆಸರಿನ ಕಮಲ, ಬ್ಯಾಂಕರ್ ಮಾರ್ಗಯ್ಯ, ನಾಗರಹೊಳೆ, ಗಿರಿಕನ್ಯೆ ಚಿತ್ರಗಳಲ್ಲೂ ನಟಿಸಿದ್ದರು.